ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್ಅಪ್ ವಾಹನ ವಶಕ್ಕೆ !

Written by Mahesha Hindlemane

Published on:

ಶೃಂಗೇರಿ ; ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್ಅಪ್ ವಾಹನವನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಶೃಂಗೇರಿಯ ಕಿರಕೋಡು ಸಮೀಪ ರಾತ್ರಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಶೃಂಗೇರಿ ಪಿಎಸ್ಐ ನೇತೃತ್ವದಲ್ಲಿ ದಾಳಿ ನಡೆಸಿ ಪಿಕ್‌ಅಪ್‌ (KA18D1900) ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಅಕ್ರಮ ಮರಳು ಸಾಗಾಟ ಮಾಡುವ ವಾಹನಗಳ ಮುಂಭಾಗ ಮಾತ್ರ ನಂಬರ್ ಪ್ಲೇಟ್ ಹೊಂದಿದ್ದು, ಹಿಂಭಾಗ ನಂಬರ್‌ ಪ್ಲೇಟ್‌ ಇಲ್ಲದೆ ಮರಳು ಸಾಗಾಟದ ದಂಧೆಗೆ ಇಳಿಯುತ್ತಿದ್ದಾರೆ.

ಅತ್ಯಂತ ವೇಗವಾಗಿ ವಾಹನವನ್ನು ಚಲಾಯಿಸುವುದರಿಂದ ಕೆಲವು ರಸ್ತೆಗಳಲ್ಲಿ ರಾತ್ರಿ ಸಮಯದ ವೇಳೆ ವಾಹನದಲ್ಲಿ ಚಲಿಸಲು ಭಯದ ವಾತಾವರಣ ಇದೆ. ಸದ್ಯ ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.

Leave a Comment