ರಾಜ್ಯ ಹೆದ್ದಾರಿ ಮಧ್ಯದಲ್ಲಿ ಹೊಂಡ – ಗುಂಡಿ ; ಜೀವ ಭಯದಲ್ಲಿ ವಾಹನ ಸವಾರರು

0 52

ರಿಪ್ಪನ್‌ಪೇಟೆ: ಹೊಸನಗರ – ರಿಪ್ಪನ್‌ಪೇಟೆ ಸಂಪರ್ಕದ ರಾಜ್ಯ ಹೆದ್ದಾರಿ ಚಿಕ್ಕಜೇನಿ ಬಳಿಯ ಮೋರಿಯ ಮಧ್ಯದಲ್ಲಿ ಹೊಂಡ, ಗುಂಡಿ ಬಿದ್ದು ವಾಹನ ಸವಾರರು ಮತ್ತು ಬಸ್‌ ಪ್ರಯಾಣಿಕರು ಜೀವಭಯದಲ್ಲಿ ಸಂಚರಿಸುವಂತಾಗಿದೆ.

ಶಿವಮೊಗ್ಗ, ಕುಂದಾಪುರ, ಉಡುಪಿ, ಕೊಲ್ಲೂರು, ಸಿಗಂದೂರು, ಹೊಸನಗರ, ಮಾಸ್ತಿಕಟ್ಟೆ, ಚಕ್ರಾನಗರ ಸಂಪರ್ಕದ ಈ ಮುಖ್ಯ ರಸ್ತೆಯಲ್ಲಿ ಮೋರಿಯ ಮಧ್ಯದಲ್ಲಿ ಹೊಂಡು ಬಿದ್ದು ಸಾಕಷ್ಟು ದಿನಗಳು ಕಳೆದರೂ ಕೂಡಾ ಲೋಕೋಪಯೋಗಿ ಇಲಾಖೆಯವರು ಹೊಂಡ ಮುಚ್ಚದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ಸರ್ಕಾರ ಮತ್ತು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸಿ ಹೊಂಡ ಮುಚ್ಚುವರೇ ಕಾದು ನೋಡಬೇಕಾಗಿದೆ.

ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳಿಲ್ಲದೇ ಗಿಂಡ-ಗಂಟಿಗಳಿಂದ ಮುಚ್ಚಿಕೊಂಡ ಸಾಗರ ಎ.ಆರ್.ಟಿ.ಓ ಕಛೇರಿ ಬಳಿಯಲ್ಲಿನ ಶೌಚಾಲಯ

ಸಾಗರ: ಸಾಗರದ ಸಾರಿಗೆ ಪ್ರಾದೇಶಿಕ ಕಛೇರಿಯ ಆವರಣದಲ್ಲಿರುವ ಶೌಚಾಯಲದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಮಹಿಳೆಯರು, ಪುರುಷರಿಗೆ ಬಯಲೇ ಶೌಚಾಲಯ ಗತಿಯಾಗಿದೆ.

ಸುಸಜ್ಜಿತ ಶೌಚಾಲಯ ಕಟ್ಟಡವಿದ್ದರೂ ಕೂಡಾ ಸರಿಯಾದ ನಿರ್ವಹಣೆಯಿಲ್ಲದೆ ಶೌಚಾಲಯದ ಒಳಗೆ ಸಂಪೂರ್ಣವಾಗಿ ಮದ್ಯದ ಬಾಟಲಿ ಮತ್ತು ಗುಟ್ಕಾ ಪ್ಯಾಕ್‌ಗಳಿಂದ ತುಂಬಿ ತುಳುಕುವಂತಾಗಿದ್ದು ಸ್ವಚ್ಚತೆಯಿಲ್ಲದೇ ಬಯಲು ಪ್ರದೇಶವನ್ನು ಅವಲಂಭಿಸುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಮಹಿಳೆಯರ ಸ್ಥಿತಿಯಂತೂ ಹೇಳಲಾಗದು
ನಿತ್ಯ ಈ ಕಛೇರಿಗೆ ಎಲ್.ಎಲ್.ಆರ್ ಮತ್ತು ಡಿ.ಎಲ್ ಹಾಗೂ ವಾಹನ ನೋಂದಣಿಗಾಗಿ ಮಹಿಳೆಯರು ಯುವತಿಯರು, ಯುವಕರು ಸಾರ್ವಜನಿಕರು ಸಹಸ್ರ ಸಂಖ್ಯೆಯಲ್ಲಿ ಬಂದು ಹೋಗುತ್ತಿದ್ದರೂ ಕೂಡಾ ಯಾವುದೇ ಸಮಸ್ಯೆಯಿಲ್ಲದರಂತೆ ಕಣ್ಣಿದ್ದು ಕುರುಡರಾಗಿ ಕಿವಿ ಇದ್ದು ಕಿವುಡರಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಾದೇಶೀಕ ಸಾರಿಗೆ ಕಛೇರಿಯ ಹಿಂಭಾಗದಲ್ಲಿ ಸುಸಜ್ಜಿತವಾಗಿ ನಿರ್ಮಿಲಾಗಿರುವ ಈ ಶೌಚಾಲಯಕ್ಕೆ ಹೋಗಿ ಬರುವುದೇ ಕಷ್ಟಕರವಾಗಿದೆ. ಗಿಡ ಗಂಟಿಗಳು ಮುಚ್ಚಿಕೊಂಡಿದ್ದು ಕಟ್ಟಡ ಕಾಣದದಂತಾಗಿದ್ದರೆ ಮಧುಮೇಹ ರೋಗದಿಂದ ನೆರಳುವವರು ಅನಾರೋಗ್ಯ ಪೀಡಿತರು ಹೀಗೆ ಮಹಿಳೆಯರು ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಪರದಾಡುವಂತಾಗಿದೆ.

ಒಂದು ಕಡೆ ನೀರಿಲ್ಲದೇ ಇರುವುದು ಇನ್ನೊಂದು ಕಡೆಯಲ್ಲಿ ಸ್ವಚ್ಚತೆ ಮೇರಿಚಿಕೆಯಾಗಿದೆ ಅಲ್ಲದೆ ಒಂದೊಂದು ನಗದು ಕೌಂಟರ್ ಬಳಿಯಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದ್ದು ಆಕಸ್ಮಿಕವಾಗಿ ತಲೆ ತಿರುಗಿ ಬಿದ್ದರೆ ಕುಡಿಯಲು ನೀರು ಇಲ್ಲದೆ ಪರದಾಡಬೇಕಾಗಿದೆ ಹೆಸರಿಗೆ ಕುಡಿಯುವ ನೀರಿನ ಡ್ರಮ್ ಇಟ್ಟಿದ್ದಾರೆ ಆದರೆ ನೀರು ಮಾತ್ರ ಇಲ್ಲದೇ ಖಾಲಿ ಡ್ರಮ್ ನೋಡಿಕೊಂಡು ಅಲ್ಲಿಯೇ ಕುಳಿತು ದಣಿವಾರಿಸಿಕೊಂಡು ಬರಬೇಕಾಗಿದೆ ಇಷ್ಟಾದರೂ ಅಧಿಕಾರಿಗಳು ಮಾತ್ರ ನಮಗೂ ಹೊರಗಡೆಯಲ್ಲಿ ನಿಂತವರಿಗೂ ಏನಾಗುತ್ತಿದೆ ಎಂಬ ಅರಿವು ಇಲ್ಲದವರಂತೆ ಇರುವುದು ಸರ್ಕಾರಿ ಕಛೇರಿಯ ದುರಾವಸ್ಥೆಗೆ ಕಡಿವಾಣ ಹಾಕಲು ಇನ್ನಾದರೂ ಅಧಿಕಾರಿಗಳು ಕಣ್ಣು ತೆರೆಯುವರೆ ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!