ಶಿವಮೊಗ್ಗ – ಹೊಸನಗರ – ಸಾಗರ – ತೀರ್ಥಹಳ್ಳಿ ಮಾರ್ಗ ಸರ್ಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಮನವಿ

0 71


ರಿಪ್ಪನ್‌ಪೇಟೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಅನುಷ್ಟಾನಗೊಳಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಡಿ ಹೊಸನಗರ ತಾಲ್ಲೂಕಿನ ಮಹಿಳೆಯರು, ಶಾಲಾ, ಕಾಲೇಜ್‌ಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ವಂಚಿತರಾನ್ನಾಗಿಸಿದ್ದು ತಕ್ಷಣ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಗಮನಹರಿಸಿ ಶಿವಮೊಗ್ಗ ಹೊಸನಗರ ಮತ್ತು ಸಾಗರ-ತೀರ್ಥಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್ ಬಿಡುವಂತೆ ಆಗ್ರಹಿಸಿ ಇಂದು ಮಹಿಳೆಯರು ನಾಡಕಛೇರಿಯ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.


ನಾಡಕಛೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮಹಿಳೆಯರಾದ ನಾಗರತ್ನ ದೇವರಾಜ್ ಪದ್ಮ ಸುರೇಶ್, ಲೀಲಾ ಉಮಾಶಂಕರ, ಮಂಜುಳಾ ಕೇತಾರ್ಜಿರಾವ್, ಮಹಾಲಕ್ಷ್ಮಿ, ಸುಧಾ ನೇರಲಮನೆ ಇನ್ನಿತರರು ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯಂತೆ ಈಗಾಗಲೇ ರಾಜ್ಯ ವ್ಯಾಪಿ ಸರ್ಕಾರಿ ಬಸ್‌ನಲ್ಲಿ ಫ್ರೀಯಾಗಿ ಮಹಿಳೆಯರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಓಡಾಡುವಂತಾಗಿದ್ದು ನಮ್ಮೂರಿಗೆ ಈ ಸಾರಿಗೆ ವ್ಯವಸ್ಥೆಯಿಲ್ಲದೆ ಖಾಸಗಿ ಬಸ್ ಮೂಲಕ ಪ್ರಯಾಣಿಸಬೇಕಾಗಿದ್ದು ತಕ್ಷಣ ಸರ್ಕಾರ ಇತ್ತ ಗಮನಹರಿಸಿ ಮಲೆನಾಡಿನ ಮಹಿಳೆಯರಿಗೂ ಫ್ರೀ ಬಸ್ ಸೌಲಭ್ಯ ಕಲ್ಪಿಸಿ ಎಂದು ಆಗ್ರಹಿಸಿದರು.


ಶಿವಮೊಗ್ಗ ಆಯನೂರು ಮಾರ್ಗದ ಮಂಡಘಟ್ಟ, ಚಿನ್ಮನೆ, ಐದನೇ ಮೈಲಿಕಲ್ಲು, ಸೂಡೂರು, 9ನೇ ಮೈಲಿಕಲ್ಲು, ಅರಸಾಳು, ಬೆನವಳ್ಳಿ, ದೂನ, ರಿಪ್ಪನ್‌ಪೇಟೆ, ಗವಟೂರು, ಬಿಳಕಿ, ಕೋಟೆತಾರಿಗ, ಜೇನಿ, ಶಾಂತಪುರ, ಕೋಡೂರು, ಹುಂಚರೋಡ್, ಮುಂಬಾರು, ಕರಿಗೊಳ್ಳಿ, ಹೊಸನಗರ, ಜಯನಗರ, ಕಾರಣಗಿರಿ, ಹನಿಯಾ, ನಗರ,
ಮಾಸ್ತಿಕಟ್ಟೆ, ಚಕ್ರಾನಗರ, ಕುಂದಾಪುರ, ಉಡುಪಿ, ಕೊಲ್ಲೂರು, ಸಾಗರ ಮಾರ್ಗದ ಆನಂದಪುರ, ಅಂದಾಸುರ, ನೆವಟೂರು, ಬಾಳೂರು, ರಿಪ್ಪನ್‌ಪೇಟೆ, ಮೂಗುಡ್ತಿ, ಹೆದ್ದಾರಿಪುರ, ಜಂಬಳ್ಳಿ, ಶಿವಪುರ, ಅಮೃತ, ಹುಂಚದಕಟ್ಟೆ, ಹುಂಚ, ಹಾದಿಗಲ್ಲು, ಕೋಣಂದೂರು, ಆರಗ, ತೀರ್ಥಹಳ್ಳಿ, ಅಗುಂಬೆ, ಸಿದ್ದಾಪುರ, ಹೆಬ್ರಿ ಮಾರ್ಗ ಓಡಾಡಲು ಖಾಸಗಿ ಬಸ್ ಬಿಟ್ಟರೇ ಸರ್ಕಾರಿ ಬಸ್ ಸೌಲಭ್ಯಗಳಲ್ಲಿ ಆದ್ದರಿಂದ ತಕ್ಷಣ ಈ ಮಾರ್ಗದಲ್ಲಿ ಎರಡು ಸರ್ಕಾರಿ ಬಸ್ ಬಿಡುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.


ನಿಯೋಗದಲ್ಲಿ ಕಾಲೇಜ್ ವಿದ್ಯಾರ್ಥಿಗಳಾದ ಬಿಂದು, ನಾಗರತ್ನ, ಗೀತಾ, ದೀಪಾ, ನಾಗಶ್ರೀ, ನವ್ಯಶ್ರೀ, ಶ್ವೇತಾ, ಲೀಲಾವತಿ, ಕಲಾವತಿ, ಶುಭ, ಮಂಗಳ, ಮಂಜುಳ, ರೇಣುಕಾ, ಐಶ್ವರ್ಯ, ವನಿತಾ, ವೀಣಾ, ಸಿಂಚನಾ, ಪ್ರೇಮ, ರಾಗಿಣಿ, ಮನ್ವಿತಾ, ಸುಮಂಗಳ, ಶಕುಂತಲಾ, ಶೀಲಾ, ಶಶಿಕಲಾ, ಶ್ಯಾಮಲ, ವನಿತಾ, ಚಿತ್ರಾ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!