ಖಾತೆ ಬದಲಾವಣೆಗಾಗಿ ಲಂಚದ ಬೇಡಿಕೆ ; ಉಪ
ತಹಶೀಲ್ದಾರ್ ಮತ್ತು ಏಜೆಂಟ್ ಲೋಕಾಯುಕ್ತ ಬಲೆಗೆ !

0 146

ಶಿವಮೊಗ್ಗ : ಲೋಕಾಯುಕ್ತ ನೇತೃತ್ವದಲ್ಲಿ ನಡೆದ‌ ಕಾರ್ಯಾಚರಣೆಯಲ್ಲಿ ಉಪ ತಹಶೀಲ್ದಾರ್ ಮತ್ತು
ಏಜೆಂಟ್ ಒಬ್ಬ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಹೊಳಲೂರಿನ ನಾಡ ಕಚೇರಿಯಲ್ಲಿ ಲಂಚ‌ ಪಡೆಯುವ ವೇಳೆ ಲೋಕಾಯುಕ್ತ ಡಿವೈಎಸ್ಪಿ ಉಮೇಶ್‌ ಈಶ್ವರ್‌ನಾಯ್ಕ ದಾಳಿ‌ ನಡೆಸಿದ್ದು ಉಪ ತಹಸೀಲ್ದಾರ್ ಪರಮೇಶ್ವರ್ ನಾಯ್ಕ್, ಮತ್ತು ಇವರಿಗೆ ಸಹಾಯ ಮಾಡಿದ್ದ ಏಜೆಂಟ್ ಒಬ್ಬ ಲೋಕ ಬಲೆಗೆ ಬಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದಿರುವ ಉಪ ತಹಶೀಲ್ದಾರ್ ಪರಮೇಶ್ವರ್‌ನಾಯ್ಕ್ ಖಾತೆ ಬದಲಾವಣೆಗಾಗಿ 40 ಸಾವಿರ ಲಂಚದ ಬೇಡಿಕೆ‌ ಇಟ್ಟಿದ್ದರು. ಶಿವಮೊಗ್ಗ ತಾಲೂಕಿನ ಕ್ಯಾತನಕೊಪ್ಪ ಗ್ರಾಮದ ಶಿವರಾಜ್ ಬಳಿ 30 ಸಾವಿರ ಹಣ ಸ್ವೀಕರಿಸುವಾಗ ಲೋಕಾಯುಕ್ತ‌ ಬಲೆಗೆ ಬಿದ್ದಿದ್ದಾರೆ. 2 ಎಕರೆ ಬಗರ್ ಹುಕುಂ ಜಮೀನು‌ ಖಾತೆ ಮಾಡಲು 40 ಸಾವಿರ ಬೇಡಿಕೆ ಇಟ್ಟಿದ್ದ ಉಪ ತಹಸೀಲ್ದಾರ್ 30 ಸಾವಿರ ರೂಪಾಯಿ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬ್ರೋಕರ್ ಪ್ರಕಾಶ್ ಮುಖಾಂತರ ಉಪ ತಹಸೀಲ್ದಾರ್
ವ್ಯವಹಾರ ನಡೆಸಿದ್ದಾರೆ. ಇಬ್ಬರನ್ನು ವಶಕ್ಕೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave A Reply

Your email address will not be published.

error: Content is protected !!