ಗ್ರಾಪಂ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವುದಾದರೆ ಮೊದಲ ಆಧ್ಯತೆ ಸಾರಾಯಿ ವ್ಯಾಪಾರಿಗಳಿಗೆ ನೀಡಿ ; ಶುಭಕರ ಪೂಜಾರಿ

0 1,388

ಹೊಸನಗರ: ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ ತೆರೆದರೆ ಸಾಕಷ್ಟು ಜನರಿಗೆ ಕೆಲಸ ಸಿಗುತ್ತದೆ ಮುಂದಿನ ದಿನದಲ್ಲಿ ತೆರೆಯಲು ಸಚಿವ ಸಂಪುಟ ಸಭೆಯಲ್ಲಿ ಅಬಕಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಚರ್ಚಿಸಲಾಗುವುದು ಎಂದು ಹೇಳಿದ್ದು ಗ್ರಾಮ ಪಂಚಾಯತಿ ಮಟ್ಟದಲ್ಲಿ ತೆರೆಯುವುದೇ ಆದಲ್ಲಿ ಮೊದಲ ಆಧ್ಯತೆ ಹಿಂದಿನ ಸಾರಾಯಿ ವ್ಯಾಪಾರಿಗಳಿಗೆ ನೀಡಬೇಕೆಂದು ಸಾರಾಯಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶುಭಕರ ಪೂಜಾರಿಯವರು ಹೇಳಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, 2006ರಲ್ಲಿ ಅಂದಿನ ಸರ್ಕಾರ ಸಾರಾಯಿ ಅಂಗಡಿ ಮುಚ್ಚುವಾಗ ಸಾರಾಯಿ ವ್ಯಾಪಾರಿಗಳಿಗೆ ಸರ್ಕಾರದಿಂದ ಅಬಕಾರಿ ಇಲಾಖೆಯಲ್ಲಿ ಕೆಲಸ ನೀಡುವುದು ಅಥವಾ ಸರ್ಕಾರದಿಂದ ಬೇರೆ-ಬೇರೆ ವ್ಯಾಪಾರ ಮಾಡಲು ಸಹಾಯಹಸ್ತ ನೀಡುವುದಾಗಿ ಭರವಸೆಯೊಂದಿಗೆ ಸಾರಾಯಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಆದರೆ ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ಸೌಲತ್ತುಗಳನ್ನು ನೀಡಿಲ್ಲ 2006ರಿಂದ ನಾವು ಕಷ್ಟಕರವಾದ ಸಂಸಾರ ನಡೆಸುತ್ತಾ ಬರುತ್ತಿದ್ದು ಇಲ್ಲಿಯವರೆಗೆ ಬಿಜೆಪಿ-ಸರ್ಕಾರ ಕಾಂಗ್ರೆಸ್ ಸರ್ಕಾರ ಹಾಗೂ ಜನತಾದಳ ಸರ್ಕಾರ ರಾಜ್ಯದಲ್ಲಿ ಆಳ್ವಿಕೆ ನಡೆಸಿದರೂ ನಮಗೆ ನೆಲೆ ಮಾಡಿಕೊಟ್ಟಿರುವುದಿಲ್ಲ. ಅಂದು 2006ರಲ್ಲಿ ಎಷ್ಟು ಜನ ಪರವಾನಗಿ ಪಡೆದು ಸಾರಾಯಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಅಬಕಾರಿ ಇಲಾಖೆಯಲ್ಲಿ ದಾಖಲೆಗಳಿವೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವುದೇ ಅದಲ್ಲಿ ಮೊದಲ ಆಧ್ಯತೆ ನಮಗೆ ನೀಡಬೇಕೆಂದು ಈ ಮೂಲಕ ಸಕಾರವನ್ನು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಚಾಲಕ್ಯ ಬಸವರಾಜ್, ರಾಧಾಕೃಷ್ಣ ಪೂಜಾರಿ, ಸುಂದರೇಶ್ ಇನ್ನೂ ಮುಂತಾದವರು ಇದ್ದರು‌.

Leave A Reply

Your email address will not be published.

error: Content is protected !!