ಬುಡಕಟ್ಟು ಜನಾಂಗಗಳ ಪಾಲಿಗೆ ಪೂರ್ವಜರು ಮತ್ತು ಪ್ರಕೃತಿಯೇ ದೇವರು ; ಡಾ. ನಾಗ ಹೆಚ್ ಹುಬ್ಳಿ

0 140

ಹೊಸನಗರ ; ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಡೆದ ಕನ್ನಡ ಸಾಹಿತ್ಯ ವೇದಿಕೆ ಮತ್ತು ಸಮಾಜ ಶಾಸ್ತ್ರ ವೇದಿಕೆಯ ವತಿಯಿಂದ ಜನಪದ ಸಾಹಿತ್ಯ ಮತ್ತು ಬುಡಕಟ್ಟು ಜನಾಂಗಗಳ ಕೊಡುಗೆ ಎಂಬ ವಿಚಾರದ ಮೇಲೆ ನಡೆದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಾರ್ಖಂಡ್ ರಾಜ್ಯದ ರಾಂಚಿ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ನಾಗ ಹೆಚ್ ಹುಬ್ಳಿ ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ನುಡಿಗಳಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಶ್ರೀಪತಿ ಹಳಗುಂದ, ಆಧುನಿಕತೆಯಲ್ಲಿ ಈ ನೆಲದ ನಿಜವಾದ ವಾರಸುದಾರರನ್ನು ನಾವೆಲ್ಲಾ ಮರೆತಿರುವುದು ವಿಷಾದ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕೆ ಉಮೇಶ್ ವಹಿಸಿದ್ದರು.
ಐಶ್ವರ್ಯ ಮತ್ತು ಲತಾ ಪ್ರಾರ್ಥಿಸಿ, ಗುರುಮೂರ್ತಿ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರತಿಮಾ ವಂದಿಸಿದರು. ನಂತರ ನಡೆದ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರಾಂಶುಪಾಲರು ವಿದ್ಯಾರ್ಥಿಗಳ ಹಲವು ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸಿದರು.

Leave A Reply

Your email address will not be published.

error: Content is protected !!