BID | Shivamogga | ಸಾರ್ವಜನಿಕ ಹರಾಜು ಪ್ರಕಟಣೆ | ಶ್ರೀ ಕ್ಷೇತ್ರ ಜೇನುಕಲ್ಲಮ್ಮ ದೇವಿ ಜಾತ್ರೆ ಅಂಗವಾಗಿ ಸೆ.25 ರಂದು ಬಹಿರಂಗ ಹರಾಜು

0 511

ರಿಪ್ಪನ್‌ಪೇಟೆ : ಶ್ರೀ ಕ್ಷೇತ್ರ ಜೇನುಕಲ್ಲಮ್ಮ ದೇವಿಯ ಜಾತ್ರೋತ್ಸವದ ಅಂಗವಾಗಿ ಸೆ.25 ರಂದು ಸೋಮವಾರ ಬೆಳಿಗ್ಗೆ 11-00 ಗಂಟೆಗೆ ಸರಿಯಾಗಿ ಅಂಗಡಿ, ಹೋಟೆಲ್ ಇತರೆ ಅಂಗಡಿಗಳ ಕರ ವಸೂಲಾತಿ ಬಗ್ಗೆ ಬಹಿರಂಗ ಹರಾಜನ್ನು ಕೋಡೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದೆ.

ಸಾರ್ವಜನಿಕರು ಈ ಹರಾಜಿನಲ್ಲಿ ಭಾಗವಹಿಸಲು ಈ ಮೂಲಕ ಕೋಡೂರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಪಿಡಿಒ, ಸಿಬ್ಬಂದಿ ವರ್ಗದವರು ಕೋರಿದ್ದಾರೆ.

ನಿಬಂಧನೆಗಳು

  • ಈ ಹರಾಜಿನಲ್ಲಿ ಭಾಗವಹಿಸುವವರು ಗ್ರಾಮ ಪಂಚಾಯಿತಿಗೆ ತೆರಿಗೆ ಹಣವನ್ನು ಪಾವತಿಸಿ, ಡಿಪಾಸಿಟ್ ಹಣ ರೂ. 5000/-ಕಟ್ಟಿ ಹರಾಜು ಕರೆಯತಕ್ಕದ್ದು.
  • ಹರಾಜು ಮುಗಿದ ಕೂಡಲೇ ಬಿಡ್‌ದಾರರು ಪೂರ್ತಿ ಹಣವನ್ನು ಏಕಗಂಟಿನಲ್ಲಿ ಪಾವತಿಸತಕ್ಕದ್ದು. ವಿಳಂಬಕ್ಕೆ ಅವಕಾಶವಿಲ್ಲ. ಮೊದಲನೇ ಬಿಡ್‌ದಾರರು ಹಣ ಪಾವತಿಸಲು ವಿಫಲವಾದರೆ ಅವರ ಬಿಡ್ ರದ್ದು ಮಾಡಿ 2ನೇ ಬಿಡ್‌ದಾರರಿಗೆ ಅವಕಾಶ ನೀಡಲಾಗುವುದು.
  • ಜಾತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.
  • ಸಾರ್ವಜನಿಕರ ಆರೋಗ್ಯದ ಬಗ್ಗೆ ಕ್ರಮ ವಹಿಸುವುದು.
  • ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದು.
  • ವ್ಯಾಪಾರಸ್ಥರಿಗೆ ಅನಾನುಕೂಲವಾಗದಂತೆ ತೆರಿಗೆ ವಸೂಲಿ ಮಾಡತಕ್ಕದ್ದು.
  • ಈ ಬಗ್ಗೆ ತೆರಿಗೆ ವಸೂಲಾತಿ ಮಾಡಲು ಗ್ರಾ.ಪಂ.ನಿಂದ ಅನುಮತಿ ಪತ್ರ ಪಡೆದು ತೆರಿಗೆ ವಸೂಲಿ ಮಾಡತಕ್ಕದ್ದು.
  • ಅನುಮತಿ ಪತ್ರ ಪಡೆಯುವ ಪೂರ್ವದಲ್ಲಿ ಹರಾಜು ಪಡೆದಿರುವ ಮೊತ್ತವನ್ನು ಪತ್ರ ಪಡೆಯುವುದು. ಸಂಪೂರ್ಣ ಪಾವತಿಸಿ ಅನುಮತಿ
  • ಈ ಬಗ್ಗೆ ಯಾವುದೇ ಷರತ್ತು ಉಲ್ಲಂಘಿಸಿದಲ್ಲಿ ಬಿಡ್‌ದಾರರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡುವುದು.
  • ಹರಾಜು ಒಪ್ಪಂದವನ್ನು ತಿರಸ್ಕರಿಸುವ ಹಕ್ಕನ್ನು ಗ್ರಾಮ ಪಂಚಾಯಿತಿಗೆ ಕಾಯ್ದಿರಿಸಿದೆ.
  • ಜಾತ್ರೆಯಲ್ಲಿ ಸಂಪೂರ್ಣ ಸ್ವಚ್ಛತೆ ನಿರ್ವಹಣೆ ಮಾಡಬೇಕು.
  • ಹರಾಜು ಮಂಜೂರಾದ ಕೂಡಲೇ 100/- ರೂ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರವನ್ನು ಬರೆದು ಕೊಡತಕ್ಕದ್ದು.

Leave A Reply

Your email address will not be published.

error: Content is protected !!