Shivamogga | ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ; ಡಿಸಿ ಡಾ|| ಆರ್.ಸೆಲ್ವಮಣಿ

0 203

ಶಿವಮೊಗ್ಗ : ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆಗಿರುವ ಡಾ|| ಆರ್.ಸೆಲ್ವಮಣಿ ಅವರು ಶಿವಮೊಗ್ಗ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನೋಂದಣಿಯಾಗಿರುವ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದರು.


ಅವರು ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು. ಪ್ರಸ್ತುತ ಜಿಲ್ಲೆಯ ಏಳು ತಾಲೂಕುಗಳ ವ್ಯಾಪ್ತಿಯಲ್ಲಿ 1793 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7,31,779 ಪುರುಷ, 7,51,159 ಮಹಿಳೆಯರು ಸೇರಿದಂತೆ ಒಟ್ಟು 14,82,938ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯ ಮತದಾರರ ಸಂಖ್ಯೆಯನ್ನು ಗಮನಿಸಿದಾಗ 20,500 ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 249ಮತಗಟ್ಟೆಗಳಿದ್ದು, 1,06,200 ಪುರುಷ, 1,08,433ಮಹಿಳೆಯರು ಸೇರಿದಂತೆ ಒಟ್ಟು 2,14,633ಮತದಾರರು, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ 253ಮತಗಟ್ಟೆಗಳಿದ್ದು, 103183 ಪುರುಷ, 1,09,587ಮಹಿಳೆಯರು ಸೇರಿದಂತೆ ಒಟ್ಟು 2,12,770ಮತದಾರರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 288ಮತಗಟ್ಟೆಗಳಿದ್ದು, 129019 ಪುರುಷ, 135700ಮಹಿಳೆಯರು ಸೇರಿದಂತೆ ಒಟ್ಟು 2,64,719ಮತದಾರರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 258ಮತಗಟ್ಟೆಗಳಿದ್ದು, 92,921 ಪುರುಷ, 95,640ಮಹಿಳೆಯರು ಸೇರಿದಂತೆ ಒಟ್ಟು 1,88,561ಮತದಾರರು, ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ 235ಮತಗಟ್ಟೆಗಳಿದ್ದು, 100456 ಪುರುಷ, 1,00,212ಮಹಿಳೆಯರು ಸೇರಿದಂತೆ ಒಟ್ಟು 2,00,668ಮತದಾರರು, ಸೊರಬ ವಿಧಾನಸಭಾ ಕ್ಷೇತ್ರದಲ್ಲಿ 239ಮತಗಟ್ಟೆಗಳಿದ್ದು, 98,147 ಪುರುಷ, 97260ಮಹಿಳೆಯರು ಸೇರಿದಂತೆ ಒಟ್ಟು 1,95,407ಮತದಾರರು ಹಾಗೂ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 271 ಮತಗಟ್ಟೆಗಳಿದ್ದು, 101853ಪುರುಷರು, 104327ಮಹಿಳೆಯರು ಸೇರಿದಂತೆ ಒಟ್ಟು 2,06,180 ಮತದಾರರಿದ್ದಾರೆ ಎಂದವರು ವಿವರಿಸಿದರು.

ಪ್ರಸ್ತುತ ಸಂದರ್ಭದಲ್ಲಿ ಕಳೆದ ಚುನಾವಣೆಯಲ್ಲಿ 1775 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅವುಗಳೊಂದಿಗೆ ಮತದಾರರ ಸಂಖ್ಯೆಯಲ್ಲಿ ಆಗಿರಬಹುದಾದ ಹೆಚ್ಚಳ, ಹಳೆ ಕಟ್ಟಡಗಳ ಬದಲಾವಣೆ, ಖಾಸಗಿ ಕಟ್ಟಡ ಹಾಗೂ ಹಲವು ಕಾರಣಗಳಿಗಾಗಿ 19ಮತಗಟ್ಟೆಗಳನ್ನು ಹೆಚ್ಚಿಸಿರುವುದಾಗಿ ತಿಳಿಸಿದ ಅವರು, ಲಿಂಗತ್ವ ಅಲ್ಪಸಂಖ್ಯಾತರ 03ಜನರನ್ನು ಒಳಗೊಂಡು 18-19ವರ್ಷ ವಯೋಮಿತಿಯೊಳಗಿನ 27,118ಮತದಾರರು, ಲಿಂಗತ್ವ ಅಲ್ಪಸಂಖ್ಯಾತರ 25ಜನರನ್ನು ಒಳಗೊಂಡು 20-29 ವರ್ಷ ವಯೋಮಿತಿಯೊಳಗಿನ 14,26,240 ಮತದಾರರು, 80-99 ವರ್ಷ ವಯೋಮಿತಿಯೊಳಗಿನ 29,327ಮತದಾರರು ಹಾಗೂ 100- 120+ ವರ್ಷ ವಯೋಮಿತಿಯೊಳಗಿನ 253 ಮಂದಿ ಮತದಾರರಿದ್ದಾರೆ. 80+ ವಯೋಮಿತಿಯ ಮತದಾರರು ಹಾಗೂ ವಿಕಲಚೇತನರು ನಿಯಮಾನುಸಾರ ಕೋರಿಕೆ ಸಲ್ಲಿಸಿದಲ್ಲಿ ಅವರಿರುವಲ್ಲಿಯೇ ಮತದಾನಕ್ಕೆ ಅವಕಾಶ ಒದಗಿಸಲಾಗುವುದು. ಕಳೆದ ಸಾಲಿನಲ್ಲಿ ಸುಮಾರು 5,00ಕ್ಕೂ ಹೆಚ್ಚಿನ ಮತದಾರರು ಈ ಸೌಲಭ್ಯವನ್ನು ಬಳಸಿಕೊಂಡಿದ್ದರು ಎಂದರು.

ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರುಗಳು ಸೇರ್ಪಡೆಗೊಂಡಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಹಾಗೂ ಸಾರ್ವಜನಿಕರು ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ, ಮತಗಟ್ಟೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಮೂಲಕ, ಅಥವಾ ಮತದಾರರೇ ನೇರವಾಗಿ ಜಾಲತಾಣ : http://www.nvsp.in ಮತ್ತು http://voterportal.eci.gov.in marte voter Helpline App ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ತಾಲೂಕು ಚುನಾವಣಾ ತಹಶೀಲ್ದಾರ್ ಮಂಜುನಾಥ್, ಸಂತೋಷ್ ಸೇರಿದಂತೆ ವಿವಿಧ ರಾಷ್ಟ್ರೀಯ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!