ಟ್ರ್ಯಾಕ್ಟರ್‌ಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು !

0 57

ತೀರ್ಥಹಳ್ಳಿ: ಟ್ರ್ಯಾಕ್ಟರ್‌ನ ಡಾಬರ್ ರಾಡ್‌ಗೆ ತಲೆ ತಾಗಿ ಮಗು ಮೃತಪಟ್ಟಿರುವ ದುರ್ಘಟನೆ ಮಂಗಳವಾರ ಹೆದ್ದೂರಿನ
ಹೊರಬೈಲು ಗ್ರಾಮದಲ್ಲಿ ನಡೆದಿದೆ.


ಗ್ರಾಮದ ಆದರ್ಶ ಅಪೂರ್ವ ದಂಪತಿಯ ಮಗು ದವ್ಯಕ್ಷ (1.8) ಮೃತಪಟ್ಟ ಮಗು. ತಂದೆ ಸಂಜೆ ಟ್ರ್ಯಾಕ್ಟರ್ ತೆಗೆಯುವ ವೇಳೆ ಓಡಿಬಂದ ಮಗು ಎಡವಿದ್ದರಿಂದ ಟ್ರ್ಯಾಕ್ಟರ್‌ನ ಡಾಬರ್ ರಾಡ್ ಹಣೆಗೆ ತಗುಲಿ ಸ್ಥಳದಲ್ಲೇ ಮಗು ಮೃತಪಟ್ಟಿದೆ. ಈ ಸಂಬಂದ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆದರ್ಶ ಹೆದ್ದೂರು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ಅಂತ್ಯಕ್ರಿಯೆ ಗ್ರಾಮದಲ್ಲಿ ನಡೆಯಿತು.

Leave A Reply

Your email address will not be published.

error: Content is protected !!