
ಸಾಗರ–ಶಿವಮೊಗ್ಗ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಪಘಾತ: ಕೆರೆಗೆ ಉರುಳದೇ ತಪ್ಪಿದ ಅನಾಹುತ
ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ‘ಕೃಷ್ಣ’ ಖಾಸಗಿ ಬಸ್ ಕಾಸ್ಪಾಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕೆರೆ ಪಕ್ಕದ ರಕ್ಷಣಾ ಬೇಲಿಗೆ ಡಿಕ್ಕಿ ಹೊಡೆದಿದೆ. ಬಸ್ ಕೆರೆಗೆ ಉರುಳದೆ ನಿಂತಿದ್ದರಿಂದ ದೊಡ್ಡ ಅನಾಹುತ ತಪ್ಪಿದ್ದು, ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ.









