
ರಿಪ್ಪನ್‌ಪೇಟೆ: ಗಣೇಶ ಚತುರ್ಥಿಗೆ ಸಜ್ಜಾದ ವಿವಿಧ ಭಂಗಿಯ ಆಕರ್ಷಕ ಗಣಪತಿ ಮೂರ್ತಿಗಳು
ರಿಪ್ಪನ್‌ಪೇಟೆ : ಮುಂಬರುವ ಸೆಪ್ಟೆಂಬರ್ 14ರ ಸೋಮವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಪಟ್ಟಣದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ವಿವಿಧ ಭಂಗಿಯ ಕಣ್ಮನ ಸೆಳೆಯುವ ಗಣಪತಿ ವಿಗ್ರಹಗಳು ಮಾರಾಟಕ್ಕೆ ಸಜ್ಜಾಗಿವೆ.









