ಖಾಸಗಿಯವರ ಪಾಲಾಗುತ್ತಿರುವ ಜಾಗ : ಅಧಿಕಾರಿಗಳು & ಜನಪ್ರತಿನಿಧಿಗಳ ಬೇಜಾವಾಬ್ದಾರಿಯಿಂದ ರಿಪ್ಪನ್‌ಪೇಟೆ ಆಸ್ಪತ್ರೆ ಜಾಗ ಪೋಡಿ ಮಾಡಲ್ಲಿಲ್ಲ ! ನೂತನ ಡಿಸಿ ತಡೆಯುವರೆ ?

0
430

ರಿಪ್ಪನ್‌ಪೇಟೆ: ಹೊಸನಗರ ರಸ್ತೆಯ ಗವಟೂರು ಗ್ರಾಮದಲ್ಲಿ ಸುಮಾರು 5 ಎಕರೆ ಜಾಗವನ್ನು ರಿಪ್ಪನ್‌ಪೇಟೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಮಂಜೂರಾತಿ ಮಾಡಿ ಈ ಹಿಂದಿನ ರಾಜ್ಯ ಕಂದಾಯ ಸಚಿವರ ಕಾಗೋಡು ತಿಮ್ಮಪ್ಪನವರು ಕಾಯ್ದಿರಿಸಲಾಗಿದ್ದು ಈ ಜಾಗವನ್ನು ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪೋಡಿ ಮಾಡಿಸಲು ಅರ್ಜಿ ಕೂಡಾ ಹಾಕಲಾದರೂ ಕೂಡಾ ಖೋ……ಖೋ……ಆಟದಲ್ಲಿ ಪೈಲ್ ಕಂಬದಿಂದ ಕಂಬ ಸುತ್ತುವಂತಾಗಿ ಕಾಯ್ದಿರಿಸಲಾದ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಮೊಗ್ಗ ರಸ್ತೆಯ ಜನವಸತಿ ಪ್ರದೇಶದಲ್ಲಿರುವ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವನ್ನು ಸಹ ಅಂದಿನ ಕಂದಾಯ ಸಚಿವರು ಕ್ಷೇತ್ರದ ಶಾಸಕರು ಮಾಡಿದ್ದು ಹಾಲಿ ಶಾಸಕರಾದ ಹರತಾಳು ಹಾಲಪ್ಪನವರು ಸಹ ಇತ್ತೀಚೆಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸಮುದಾಯ ಕೇಂದ್ರವನ್ನಾಗಿಸುವು ಭರವಸೆ ನೀಡಿದ್ದು ಅವರ ಭರವಸೆ ಕಾರ್ಯಗತವಾಗುವುದೆ ಎಂಬ ಸಂಶಯ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಸಂದರ್ಭದಲ್ಲಿ ಸಹ ಆಸ್ಪತ್ರೆಯಲ್ಲಿ ಸರಿಯಾಗಿ ವೈದ್ಯಾಧಿಕಾರಿಗಳು ಇರುವುದಿಲ್ಲ ರಾತ್ರಿ ಪಾಳಿಯ ವೈದ್ಯರು ಇಲ್ಲದೆ ರೋಗಿಗಳು ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಸಾಗರ, ತೀರ್ಥಹಳ್ಳಿ, ಮಣಿಪಾಲ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿರ್ವಾತೆ ಎದುರಾಗಿದ್ದರೂ ಕೂಡಾ ಜನಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಹೇಳೋರು ಕೋಳೋರು ಇಲ್ಲದಂತಾಗಿರುವ ಈ ಆಸ್ಪತ್ರೆಗೆ ಚಿಕಿತ್ಸೆ ನೀಡುವವರು ಯಾರು ? ಎಂಬಂತಾಗಿದೆ.

ಕ್ಷೇತ್ರ ಶಾಸಕ ಹರತಾಳು ಹಾಲಪ್ಪನವರು ನೋಡಿ ಕೇಳಿ ಸಾಕಪ್ಪ ಎಂಬಂತಾಗಿ ‘ಹಾಳು ಊರಿಗೆ ಉಳಿದವನೇ ಗೌಡ’ ಎಂಬ ಗಾದೆ ಮಾತಿನಂತೆ ಯಾರು ಏನು ಮಾತನಾಡಿದರು ಕೇಳಿಸಿದವರಂತೆ ಮೂಕರಾಗಿಬಿಟ್ಟಿದ್ದಾರೆ. ಒಟ್ಟಾರೆಯಾಗಿ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಮುಕ್ತಿದೊರೆಯುವುದಕ್ಕಿಂತ ಸಮಸ್ಯೆಗಳ ಸವಾಲು ಎದುರಿಸುವುದೆ ದೊಡ್ಡ ಸವಾಲಾಗಿದೆ ಎಂದು ಸುಮ್ಮನಾಗುತ್ತಾರೆ.

ಯಾವುದೇ ಅಪಘಾತಗಳು ಅವಘಡಗಳು ಸಂಭವಿಸಿದರೆ ಗರ್ಭೀಣಿಯರು ಹೆರಿಗೆ ನೋವಿನಿಂದ ಬಳಲುತ್ತಾ ಬಂದರೂ ಕೂಡಾ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ವೈದ್ಯರೆ ಇರುವುದಿಲ್ಲ ಇಂತಹ ಅಸ್ಪತ್ರೆ ನಮ್ಮೂರಿಗೆ ಬೇಕಾ ? ಎಂಬ ಕೂಗು ಸಾರ್ವಜನಿಕರದ್ದಾಗಿದೆ.

ಒಟ್ಟಾರೆಯಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ನೂತನವಾಗಿ ವರ್ಗಾವಣೆಯಾಗಿ ಬಂದಿರುವ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಪರಿಹಾರ ಕಲ್ಪಿಸುವರೆ ಕಾದು ನೋಡಬೇಕಾಗಿದೆ.

ಇನ್ನೂ ಈ ಅಸ್ಪತ್ರೆಗೆ ಹೊಸನಗರ ರಸ್ತೆಯಲ್ಲಿ ಐದು ಎಕರೆ ಜಾಗ ಮಂಜೂರಾಗಿದ್ದು ಸುಸರ್ಜಿತ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವ ಮೊದಲೇ ಖಾಸಗಿಯವರ ಪಾಲಾಗುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಸಾರ್ವಜನಿಕರು ಸ್ಥಳೀಯಾಡಳಿತ ತೀವ್ರ ಅಸಮದಾನ ವ್ಯಕ್ತಪಡಿಸಿ ಕಂದಾಯ ಮತ್ತು ಅರೋಗ್ಯ ಇಲಾಖಾಧಿಕಾರಿಗಳ ಈ ವರ್ತನೆ ಸಾರ್ವಜನಿಕರಲ್ಲಿ ನೋವುಂಟುಮಾಡಿದೆ.

ಜಾಹಿರಾತು

LEAVE A REPLY

Please enter your comment!
Please enter your name here