ಅಬ್ಬರದ ಮಳೆ ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ಥ !

0
756

ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕರಾವಳಿ ಹಾಗೂ ಮಲೆನಾಡು ಸೇರಿದಂತೆ ವಿವಿಧ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಹೊಸನಗರ, ಸಾಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಿನ್ನೆ ಸಂಜೆಯಿಂದಲೇ ಆರಂಭವಾದ ಮಳೆ ಬಿಟ್ಟೂ ಬಿಡದೇ ಸುರಿದಿದೆ. ಬೆಳಗ್ಗೆ ಒಂದೆರಡು ಗಂಟೆಗಳ‌ ಕಾಲ ಬಿಡುವು ನೀಡಿದ್ದ ಮಳೆ ಬಳಿಕ ಬಿರುಸುಗೊಂಡಿದ್ದು, ಒಂದೇ ಸಮನೆ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು ಪರದಾಡುವಂತಾಗಿದೆ. ಮಹಾಲಯ ಅಮಾವಾಸ್ಯೆ ಪೂಜಾ ಕಾರ್ಯ ನೆರವೇರಿಸಲು ಭಾರಿ ಮಳೆ ಅಡ್ಡಿಯಾಗಿದೆ. ಪೂಜೆಗೆ ಅಗತ್ಯವಾದ ಸಾಮಗ್ರಿಗಳ ಖರೀದಿ, ಪಿತೃಪಕ್ಷ ಪೂಜೆ ನೆರವೇರಿಸಲು ತೊಂದರೆಯಾಗಿದೆ.

ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಗಳಿಂದಾಗಿ ಮೊದಲೇ ಅಧ್ವಾನಗೊಂಡ ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ನದಿಯಂತಾದ ರಸ್ತೆಗಳಲ್ಲಿ ಸಂಚರಿಸಲಾಗದೆ ವಾಹನ ಸವಾರರು ಪರದಾಡಿದರು.

ಇಂದು ಬೆಳಗ್ಗೆ ಕೊಂಚ ಬ್ರೇಕ್ ಕೊಟ್ಟಿದ್ದನಾದರೂ ಕೊಂಚ ಬಿಡುವಿನ ನಂತರ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದಾನೆ.

ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಜಮೀನು ಗದ್ದೆಗಳು ಜಲಾವೃತಗೊಂಡು ಅಡಿಕೆ, ಭತ್ತ, ಮೆಕ್ಕೆಜೋಳ, ಶುಂಠಿ ಬೆಳೆಗಳಿಗೆ ಹಾನಿಯಾಗಿದೆ.‌

ಈ ರೀತಿ ಹುಚ್ಚು ಮಳೆ ಸುರಿಯುತ್ತಿರುವುದು ಬೆಳೆಗಾರರು ಅದರಲ್ಲೂ ಸಣ್ಣ ಬೆಳೆಗಾರರು ಕಂಗಾಲಾಗಿದ್ದಾರೆ. ಸರ್ಕಾರದಿಂದ ಸಮರ್ಪಕ ಪರಿಹಾರವೂ ಸಿಗಲ್ಲ. ಮಳೆ ನೋಡಿದರೆ ಈಗೆ ಸುರಿಯುತ್ತಿದೆ ನಾವು ಮುಂದೆ ಬದುಕೋದೇಗೆಂದು ಮಲೆನಾಡಿಗರು ಚಿಂತಾಕ್ರಾಂತರಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here