‘ಕಲ್ಲುಗುಡ್ಡೆ’ ಎಂದು ಹಕ್ಕುಪತ್ರ ನೀಡಿ : ಗ್ರಾಮಸ್ಥರಿಂದ ತಹಶಿಲ್ದಾರ್‌ಗೆ ಮನವಿ

0
414

ಹೊಸನಗರ: ತಾಲ್ಲೂಕು ರಾಮಚಂದ್ರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದ ಕಲ್ಲುಗುಡ್ಡೆ ಎಂಬ ಹೆಸರಿದ್ದು ಅದನ್ನು ಕೆಲವು ಅಧಿಕಾರಿಗಳ ಕೈ ತಪ್ಪಿನಿಂದ ಸರ್ವೆನಂಬರ್ 44ರ ಕೆಲವು ಹಕ್ಕುಪತ್ರಗಳಲ್ಲಿ ಅಜಾದ್ ನಗರ ಎಂದು ಅಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರಗಳನ್ನು ನೀಡಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದು ರಾಮಚಂದ್ರಪುರ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಗಿದ್ದು ನಂತರದ ಬೆಳವಣಿಗೆಯಲ್ಲಿ ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂದನ್ ಹಾಗೂ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರನಾಯ್ಕ್ ರವರ ಸಮಕ್ಷೇಮದಲ್ಲಿ ಕಲ್ಲುಗುಡ್ಡೆ ಹಿಂದಿನ ಹೆಸರಾಗಿದ್ದು ಅದೇ ಹೆಸರನ್ನು ಮುಂದುವರೆಸುವುದಾಗಿ ಅಲ್ಲಿನ ನಿವಾಸಿಗಳು ಭರವಸೆಯ ಜೊತೆಗೆ ಬೋರ್ಡ್ ಸಹ ಹಾಕಲಾಗಿದೆ ಆದರೆ ತಾಲ್ಲೂಕು ಕಛೇರಿಯಿಂದ ಅಲ್ಲಿನ ನಿವಾಸಿಗಳ ಕೆಲವು ಹಕ್ಕು ಪತ್ರಗಳಲ್ಲಿ ಸ್ಕೇಜ್‌ಗಳಲ್ಲಿ ಅಜಾದ್‌ನಗರ ಎಂದು ನಮೂದಿಸಲಾಗಿದ್ದು ಅದನ್ನು ಸರಿ ಪಡಿಸಬೇಕು ಹಾಗೂ ಮುಂದೆ ಯಾವುದೇ ಹೊಸದಾಗಿ ನೀಡುವ ಹಕ್ಕುಪತ್ರಗಳಿಗೆ ಕಲ್ಲುಗುಡ್ಡೆ ಎಂದು ನಮೂದಿಸಬೇಕೆಂದು ಮೇಲಿನ ಬೆಸಿಗೆಯ ಕೆಲವು ಯುವಕರ ತಂಡ ಹೊಸನಗರದ ತಾಲ್ಲೂಕು ಕಛೇರಿಯ ಗ್ರೇಡ್2 ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here