ಸಿನಿಮೀಯ ರೀತಿಯಲ್ಲಿ ಗೋವುಗಳ ಕಳ್ಳ ಸಾಗಾಣಿಕೆ ಪ್ರಕರಣ: 12 ಗಂಟೆಗಳಲ್ಲಿ ಖದೀಮರ ಹೆಡೆಮುರಿ ಕಟ್ಟಿದ ಹೊಸನಗರ ಪೊಲೀಸರು !

0
21353

ಹೊಸನಗರ: ತಾಲ್ಲೂಕು ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಾದಲ್ಲಿ ಬುಧವಾರ ರಾತ್ರಿ ಸುಮಾರು 8 ಹಸುವಿನ ಕರುವನ್ನು ತುಂಬಿಕೊಂಡು ಅಕ್ರಮ ಗೋಸಾಗಣಿಕೆ ನಡೆಸಿದ್ದಾರೆ ಎಂದು ಸುಧೀಂದ್ರ ಪಂಡಿತ್‌ರವರ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಪೊಲೀಸ್ ಉಪನಿರೀಕ್ಷಕರು ತೀರ್ಥಹಳ್ಳಿ ಹಾಗೂ ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂದನ್‌ರವರ ಮಾರ್ಗದರ್ಶನದಲ್ಲಿ ಹೊಸನಗರ ಪಿಎಸ್‌ಐ ರಾಜೇಂದ್ರ ನಾಯ್ಕ್ ರವರ ನೇತೃತ್ವದಲ್ಲಿ ಎ.ಎಸ್‌ಐಗಳಾದ ಸುರೇಶ್, ಶ್ರೀನಿವಾಸ್, ಹೆಚ್.ಸಿ ಸತೀಶ್‌ರಾಜ್, ಚಂದ್ರಶೇಖರ ನಾಯ್ಕ್, ಗಿರಿಪ್ರಸಾದ್, ಸಿಪಿಸಿ ಕಿರಣ್‌ಕುಮಾರ್, ಅಮೃತ್ ಸಾಗರ್, ಅಶೋಕನಾಯ್ಕ, ಆದರ್ಶ, ಗೋಪಾಲಕೃಷ್ಣ, ದಿನೇಶ್‌ರವರ ಸತತ ಪರಿಶ್ರಮದಿಂದ ಕೇವಲ 12ಗಂಟೆಯ ಒಳಗೆ 08 ಹಸುವಿನ ಗಂಡು ಕರು, 3 ಅಪರಾಧಿಗಳು ಹಾಗೂ ಸಾಗಾಣಿಕೆಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ಅಪರಾಧಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ.

ಘಟನೆ ವಿವರ:

ಬುಧವಾರ ರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ಸುತ್ತಾ ಗ್ರಾಮದಲ್ಲಿ ಹಸುಗಳ ಕರುಗಳನ್ನು ಅಲ್ಲಿನ ನಿವಾಸಿಗಳಾದ ನಾಗರಾಜ ಗೌಡ, ತಿಮ್ಮ @ ತಿಮ್ಮಪ್ಪನವರು ನಜೀವುಲ್ಲ@ಜಜ್ಜು ಎಂಬುವವರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದ್ದು ಕೆಎ46-6301ರ ಗೂಡ್ಸ್ ಆಟೋದಲ್ಲಿ ಈ ವಾಹನದ ಚಾಲಕ ನಜೀವುಲ್ಲರವರು ಡ್ರೈವಿಂಗ್ ಮಾಡಿಕೊಂಡು ಅಕ್ರಮ ಗೋ ಸಾಗಣಿಕೆ ಬಳಸಲು ಹೋಗುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಹೊಸನಗರ ತಹಶೀಲ್ದಾರ್ ವಿ.ಎಸ್ ರಾಜೀವ್‌ರವರಿಗೆ ತಿಳಿಸಿದ್ದು ರಾಜೀವ್‌ರವರು ರಿಪ್ಪನ್‌ಪೇಟೆಯವರೆಗೆ ಚೇಸ್ ಮಾಡಿದರೂ ಹಸುವಿನ ಕರುಗಳನ್ನು ತುಂಬಿದ ವಾಹನ ಸಿಕ್ಕಿರಲಿಲ್ಲ ಸುಧೀಂದ್ರ ಪಂಡಿತ್‌ರವರು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಹೊಸನಗರದ ಪೊಲೀಸ್ ಇಲಾಖೆ ಕೇವಲ 12ಗಂಟೆಯಲ್ಲಿ ಮೂವರು ಅಪರಾಧಿಗಳನ್ನು ಹಾಗೂ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ ಪೋಲೀಸರ ಈ ಕಾರ್ಯಚರಣೆಗೆ ಹೊಸನಗರ ತಾಲ್ಲೂಕಿನ ಜನರು ಪ್ರಶಂಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here