ಹೊಸನಗರ: ಜನ ಔಷಧಿ ಕೇಂದ್ರದ ಬಾಗಿಲು ಬಂದ್ ! ಬಡ ರೋಗಿಗಳ ಪರದಾಟ

0
478

ಹೊಸನಗರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಂಭಾಗವಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಬಾಗಿಲು ತೆರೆಯದೆ ಒಂದು ವಾರವಾಗಿದ್ದು ಅರ್ಧ ಬೆಲೆಯಲ್ಲಿ ಔಷಧಿ ಪಡೆಯುತ್ತಿದ್ದ ರೋಗಿಗಳ ಪರದಾಟ ಹೇಳ ತೀರದಾಗಿದೆ.

ಹೌದು, ದಿನಕ್ಕೆ ನೂರಾರು ಜನರು ಔಷಧಿ ಪಡೆಯಲು ಬಂದು ಬಾಗಿಲು ಮುಚ್ಚಿರುವುದನ್ನು ನೋಡಿಕೊಂಡು ವಾಪಸ್ಸು ಹೋಗುತ್ತಿದ್ದಾರೆ.

ನಮ್ಮ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು ಯಾವುದೇ ಕಾಯಿಲೆಗೆ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ ಅರ್ಧ ಬೆಲೆಗೆ ಔಷಧಿಗಳನ್ನು ನೀಡಲಾಗುತ್ತದೆ ಎಂದು ಭಾಷಣದಲ್ಲಿ ಹೇಳುತ್ತಾರೆ. ಬಡವರು ಹೆದರುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿ ಒಂದು ವಾರದಿಂದ ಜನ ಔಷಧಿ ಕೇಂದ್ರ ಬಾಗಿಲು ಹಾಕಿರುವುದು ಯಾವುದೇ ರಾಜಕೀಯ ನಾಯಕರ ಕಣ್ಣಿಗೆ ಬೀಳುತ್ತಿಲ್ಲ. ಜನ ಔಷಧಿ ಕೇಂದ್ರ ಬಾಗಿಲು ಹಾಕಿರುವುದರಿಂದ ಹೊಸನಗರ ತಾಲ್ಲೂಕಿನ ಎಲ್ಲ ಜನರಿಗೂ ತೊಂದರೆಯಾಗಿದ್ದು ಪ್ರತಿ ದಿನ ಸೇವಿಸುವ ಬಿ.ಪಿ, ಶುಗರ್ ಮಾತ್ರೆಗಳ ಬೆಲೆ ಕಡಿಮೆ ಇರುವುದರಿಂದ ಸಾಮಾನ್ಯವಾಗಿ ಜನ ಔಷಧಿ ಕೇಂದ್ರ ಪ್ರಾರಂಭವಾದ ದಿನದಿಂದ ಈ ಕೇಂದ್ರದಲ್ಲೇ ಅರ್ಧ ಬೆಲೆಗೆ ಪಡೆಯುತ್ತಿದ್ದರು.

ಸರ್ಕಾರಿ ಕೆಲಸದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅಧಿಕಾರಿಗಳಿಗೆ ಬರುವುದು ಅರ್ಧ ಸಂಬಳ, ಅದರಲ್ಲಿ ಜನ ಔಷಧಿ ಕೇಂದ್ರದಲ್ಲಿ ಅರ್ಧ ಬೆಲೆಗೆ ಸಿಗುತ್ತಿದ್ದ ಮಾತ್ರೆ, ಔಷಧಿಗಳನ್ನು ಪಡೆದು ಸೇವಿಸುತ್ತಿದ್ದರು. ಕಳೆದ ಒಂದು ವಾರದಿಂದ ಕೆಲಸಗಾರರು ಇಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಜನ ಔಷಧಿ ಕೇಂದ್ರದ ಬಾಗಿಲು ಮುಚ್ಚಲಾಗಿದೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಜನ ಪ್ರತಿನಿಧಿಗಳು, ಗೃಹ ಸಚಿವರು ಹಾಗೂ ನಮ್ಮ ಕ್ಷೇತ್ರದ ಶಾಸಕರು ಇತ್ತ ಕೂಡಲೇ ಗಮನ ಹರಿಸಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ಜನ ಔಷಧಿ ಕೇಂದ್ರದ ಬಾಗಿಲು ತಕ್ಷಣ ತೆರೆಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here