ಚಂದ್ರಗುತ್ತಿ ; ಭಕ್ತರಿಂದ ಬಂದ ಸೀರೆ ಮತ್ತು ರವಿಕೆ ವಸ್ತ್ರಗಳ ಬಹಿರಂಗ ಹರಾಜು – ₹ 4.90 ಲಕ್ಷ ಆದಾಯ

0 41

ಸೊರಬ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇಗುಲಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದಂತಹ ಸೀರೆ ಮತ್ತು ರವಿಕೆ ವಸ್ತ್ರಗಳನ್ನು ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ಸಾರ್ವಜನಿಕ ಬಹಿರಂಗ ಹರಾಜು ನಡೆಸಲಾಯಿತು.

ಎರಡು ವರ್ಷಗಳಿಂದ ಸಂಗ್ರಹವಾಗಿದ್ದ ಸೀರೆ ಮತ್ತು ರವಿಕೆ ವಸ್ತ್ರಗಳನ್ನು ಚಂದ್ರಗುತ್ತಿ ಪ್ರಭಾರ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಹರಾಜು ಮಾಡಲಾಯಿತು.
ಹರಾಜಿನಿಂದ ಒಟ್ಟು 4.90 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.


2021 ಜನವರಿ ತಿಂಗಳಲ್ಲಿ ಸೀರೆ ಮತ್ತು ರವಿಕೆ ವಸ್ತ್ರಗಳನ್ನು ಹರಾಜು ಮಾಡಿದಾಗ 4.70 ರೂ. ಸಂಗ್ರವಾಗಿತ್ತು. 2023 ಜುಲೈ ತಿಂಗಳಿನಲ್ಲಿ ಹರಾಜು ಮಾಡಿದಾಗ 4.90 ರೂ. ಸಂಗ್ರಹವಾಗಿದೆ.

ಹರಾಜು ಪ್ರಕ್ರಿಯೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಸದಸ್ಯರಾದ ಶಿವಶಂಕರ್ ಗೌಡ್ರು, ವೆಂಕಟೇಶ್, ಪ್ರಮುಖರಾದ ಪರಶುರಾಮ್ ಬೋವಿ, ಗಣೇಶ್ ಮರಡಿ, ಸದಾನಂದ ಕಾಮತ್, ದಿನೇಶ್ ಅಂಚೆ, ಸಿಬ್ಬಂದಿ ಚಂದನ್, ಸೇರಿದಂತೆ ಗ್ರಾಮ ಲೆಕ್ಕಗಳು, ದೇವಸ್ಥಾನದ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!