ಅಪ್ರಾಪ್ತೆಗೆ ಅಮಲು ಬರುವ ಔಷಧ ಕುಡಿಸಿ ಇಬ್ಬರಿಂದ ಲೈಂಗಿಕ ದೌರ್ಜನ್ಯ ; ಪ್ರಕರಣ ದಾಖಲು

0 101

ಸಾಗರ : ಇಲ್ಲಿನ ಜೆಪಿ ನಗರದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಕ್ಕೆ ಸಂಬಂಧಪಟ್ಟಂತೆ ಸಾಗರ ಪೇಟೆ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಜೆಪಿ ನಗರದ 16 ವರ್ಷದ ಹುಡುಗಿಯೊಬ್ಬಳನ್ನು ಪುಸಲಾಯಿಸಿ ಸೊರಬ ರಸ್ತೆಯ ಅಜ್ಜಿ ಮನೆಯಿಂದ ಆ. 18ರಂದು ಜೋಗ ಜಲಪಾತ, ನಿಪ್ಪಳಿ ಫಾಲ್ಸ್ ನೋಡಲು ಇಬ್ಬರು ಯುವಕರು ಕರೆದುಕೊಂಡು ಹೋಗಿದ್ದಾರೆ.

ನಿಪ್ಪಳಿ ಫಾಲ್ಸ್ ಹತ್ತಿರ ಆಕೆಗೆ ತಂಪು ಪಾನೀಯದಲ್ಲಿ ಅಮಲು ಬರುವ ಔಷಧಿ ಬೆರೆಸಿ ಕುಡಿಸಿದ್ದಾರೆ. ಬಳಿಕ ಎಚ್ಚರ ತಪ್ಪಿದ ಹುಡುಗಿಯ ಮೇಲೆ ಇವರಿಬ್ಬರು ಅತ್ಯಾಚಾರ ನಡೆಸಿರುವುದಾಗಿ ಆ. 21ರಂದು ದೂರು ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಪಿ ನಗರ ನಿವಾಸಿಗಳಾದ ಅಜಯ್ ಮತ್ತು ಶಹಬಾಜ್ ಎಂಬುವವರ ಮೇಲೆ ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆ ಪೋಕ್ಸೋ ಕಾಯ್ದೆ ಜೊತೆ 406, 376 ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಪ್ಪಿಸಿಕೊಂಡಿದ್ದು ಇಬ್ಬರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Leave A Reply

Your email address will not be published.

error: Content is protected !!