
ಬರಗಾಲದ ಹೊಡೆತ: ಶಿವಮೊಗ್ಗ ಜಿಲ್ಲೆಯ ರೈತರ ಸಾಲ ಮರುಪಾವತಿಗೆ ಬಂತು ಹೊಸ ನಿಯಮ! ಇಲ್ಲಿದೆ ಪೂರ್ಣ ಮಾಹಿತಿ
ಶಿವಮೊಗ್ಗ ಜಿಲ್ಲೆಯ ಅನ್ನದಾತರಿಗೆ ಸರ್ಕಾರ ಮಹತ್ವದ ನೆರವು ಘೋಷಿಸಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದ್ದು, ರೈತರು ಪಡೆದಿರುವ ಬೆಳೆಸಾಲದ ಮರುಪಾವತಿ ಗಡುವನ್ನು ಮೂರರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿಷಿ ಆನಂದ್ ತಿಳಿಸಿದ್ದಾರೆ.








