ಎನ್‌ಎಂಡಿಸಿ ತಂಡಕ್ಕೆ ಬ್ಲೂ ಮೌಂಟೆನ್ ಟ್ರೋಫಿ

0 210

ತರೀಕೆರೆ : ತಾಲ್ಲೂಕಿನ ಗಡಿ ಭಾಗದ ಸಂತವೇರಿ ಗ್ರಾಮದ ಬ್ಲೂ ಮೌಂಟೆನ್ ಕ್ರೀಡಾಂಗಣದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ನಡೆದ ಬ್ಲೂ ಮೌಂಟನ್ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಎನ್‌ಎಂಡಿಸಿ ತಂಡ ಪ್ರಥಮ ಸ್ಥಾನದೊಂದಿಗೆ 30 ಸಾವಿರ ರೂ., ಟ್ರೋಫಿ ಪಡೆದರೆ, ಸೂಪರ್ ಸ್ಟಾರ್ ತಂಡ ದ್ವಿತೀಯ ಸ್ಥಾನದೊಂದಿಗೆ 15 ಸಾವಿರ ರೂ., ಟ್ರೋಫಿ, ಮಲೆನಾಡು ರಾಯಲ್ಸ್ ತೃತೀಯ ಸ್ಥಾನದೊಂದಿಗೆ 3,500 ರೂ., ಟ್ರೋಫಿ ಮತ್ತು ಸಂತವೇರಿಯ ಎಫ್‌ವೈಸಿಸಿ ತಂಡ ಚತುರ್ಥ ಸ್ಥಾನದೊಂದಿಗೆ ಆಕರ್ಷಕ ಟ್ರೋಫಿ ಪಡೆದವು.

ವಿಜೇತ ತಂಡಗಳಿಗೆ ಕಾಮನದುರ್ಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸೋತವರು ನಿರಾಶರಾಗದೆ, ತಮ್ಮ ತಂಡ ಎಲ್ಲಿ ಎಡವಿತು ಎಂಬುದನ್ನು ಅರಿತು ಆಡಿದರೆ, ಮುಂದಿನ ದಿನಗಳಲ್ಲಿ ಪ್ರಶಸ್ತಿಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾಮನದುರ್ಗ ಗ್ರಾಮ ಪಂಚಾಯಿತಿ ಸದಸ್ಯ ಡಿ.ಜನಾರ್ಧನ್ ಮಾತನಾಡಿ, ಕ್ರೀಡೆಗಳಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಢಗೊಳ್ಳುವುದರ ಜೊತೆಗೆ ಸ್ನೇಹ, ಬಾಂಧವ್ಯ, ಸೌಹಾರ್ದತೆ ಬೆಸೆಯುತ್ತದೆ. ಕ್ರೀಡಾಕೂಟಕ್ಕೆ ಅದರದೇ ಆದ ಮಹತ್ವವಿದೆ. ಅದು ಸಾಮಾಜಿಕವಾಗಿ ಒಂದು ತಂಡವಾಗಿ ರೂಪಿಸುತ್ತದೆ. ಕ್ರೀಡೆ ಸದಾ ನಮ್ಮನ್ನು ಜಾಗೃತರನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.

ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕೆ.ತಳವಾರ್ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಸಂತವೇರಿಯ ಬಿಎಂಇ ತಂಡ ಕ್ರೀಡಾ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಹಮದ್ ಕುಟ್ಟಿ, ಸನ್ ಡೈರೆಕ್ಟ್ ವಿತರಕ ಸುರೇಶ್, ಹಿರಿಯ ಆಟಗಾರರಾದ ಜಾನ್ಸನ್, ಎಸ್.ಎನ್.ಸೋಮಶೇಖರ್, ಸೆಂದಿಲ್, ಸಿಲಂಬರಸನ್, ಹರೀಶ್, ವಿಷ್ಣು, ಗಿರೀಶ್, ದಯಾಳ್, ವಾರಿರ‍್ಸ್, ಎಫ್‌ವೈಸಿಸಿ, ರಾಯಲ್ ಬಾಯ್ಸ್ ತಂಡದ ಆಟಗಾರರು ಸೇರಿದಂತೆ ಮತ್ತಿತರರು ಇದ್ದರು.

ಪಂದ್ಯ ಪುರುಷೋತ್ತಮ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಎನ್‌ಎಂಡಿಸಿ ತಂಡದ ಲೋಹಿತ್, ವಿನು ಪಡೆದರೆ, ಬೆಸ್ಟ್ ಆಲ್‌ರೌಂಡರ್ ಆಗಿ ಮಲೆನಾಡು ರಾಯಲ್ಸ್ ತಂಡದ ಹೇಮಂತ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಸ್ಕೈ ವಾರ‍್ಸ್ ತಂಡದ ಗಣೇಶ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸೂಪರ್ ಸ್ಟಾರ್ ತಂಡದ ರಕ್ಷಿತ್ ಪಡೆದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ 25ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

Leave A Reply

Your email address will not be published.

error: Content is protected !!