ಬಿಜೆಪಿ ಪಕ್ಷ ತತ್ವ ಸಿದ್ದಾಂತದ ಶಿಸ್ತಿನ ಪಕ್ಷ, ಗೊಂದಲಗಳಿದ್ದರೆ ಪಕ್ಷದ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಿ ; ಆರಗ ಜ್ಞಾನೇಂದ್ರ

0 32

ರಿಪ್ಪನ್‌ಪೇಟೆ: ಬಿಜೆಪಿ ಪಕ್ಷ ತತ್ವ ಸಿದ್ದಾಂತದ ಶಿಸ್ತಿನ ಪಕ್ಷ. ನಮ್ಮ ಪಕ್ಷದ ಆಂತರಿಕ ಗೊಂದಲವನ್ನು ನಾಲ್ಕು ಗೋಡೆಯ ಮಧ್ಯ ಪಕ್ಷದ ಸಭೆಯಲ್ಲಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯವೆಂದು ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿರ ಬಹುದು ಇದು ಬಿಜೆಪಿ ಪಕ್ಷಕ್ಕೆ ಸೋಲು ಎಂಬುದು ಹೊಸದೇನು ಅಲ್ಲ. ಸದಾ ಜನಸಾಮಾನ್ಯರ ಸಮಸ್ಯೆಗಳ ಪರ ಹೋರಾಟ ನಡೆಸುತ್ತಾ ಅಧಿಕಾರದ ಆಸೆಗಾಗಿ ಎಂದು ನಾವು ಅಂಟಿಕೊಳ್ಳದೇ ಪಕ್ಷದ ತತ್ವಸಿದ್ದಾಂತದೊಂದಿಗೆ ಸಂಘಟನೆಯಲ್ಲಿ ಬೆಳೆದುಬಂದವರು ಎಂಬುದನ್ನು ನಮ್ಮ ಪಕ್ಷದ ನಾಯಕರು ಕಾರ್ಯಕರ್ತರು ಮರೆಯಬಾರದು ಎಂದು ಹೇಳುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿಯೋ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ ಗ್ಯಾರಂಟಿ ಕಾರ್ಡ್ ಗೆದ್ದಿದೆ. ಆದರೆ ಅದನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ತಿಣುಕಾಡುತ್ತಿದೆ ಎಂದು ಹೇಳಿ ಈಗಾಗಲೇ ಗೃಹ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ವಿದ್ಯುತ್ ದರ ಹೆಚ್ಚಳದಿಂದಾಗಿ ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರವರು ಈ ಹಿಂದಿನ ಸರ್ಕಾರ ವಿದ್ಯುತ್ ಬೆಲೆ ಹೆಚ್ಚಿಸಿದ್ದು ಎಂದು ಹೇಳಿ ಜನರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹಾಗಾದರೆ ಈ ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ಮತ್ತು ಮತಾಂತರ ನಿಷೇಧದಂತಹ ವಿದೇಯಕವನ್ನು ಕಾಂಗ್ರೆಸ್ ಪಕ್ಷದ ಆಧಿಕಾರ ಹಿಡಿದ ತಕ್ಷಣ ವಾಪಾಸ್ಸು ಪಡೆಯುತ್ತೇವೆಂದು ಹೇಳುತ್ತಿದ್ದು ಹಾಗಾದರೆ ವಿದ್ಯುತ್ ಬೆಲೆಯನ್ನು ಹಿಂಪಡೆಯ ಬಹುದಾಗಿತು ಏಕೆ ನಮ್ಮ ಪಕ್ಷದ ಮೇಲೆ ಗೊಂಬೆ ಕುರಿಸುವ ಕೆಲಸ ಮಾಡುತ್ತಿದ್ದಾರೆಂದು ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡ ಅವರು ವಿದ್ಯುತ್ ನಿಗಮದವರು ಯೂನಿಟ್ ಬೆಲೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕಳುಹಿಸಿದರು ಆದರೆ ಅದರ ಬಗ್ಗೆ ನಿರ್ಧಾರವಾಗಿರಲ್ಲಿಲ್ಲ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಹಿಡಿಯುವ ಮುನ್ನವೇ ತಮ್ಮ ಗ್ಯಾರಂಟಿ ಯೋಜನೆಗೆ ಆರ್ಥಿಕ ಸಮತೋಲನ ಮಾಡಿಕೊಳ್ಳುವ ಉದ್ದೇಶದಿಂದ ಬಡವರ ಕೂಲಿ ಕಾರ್ಮಿಕರ ಜೇಬಿಗೆ ಅತ್ತ ಮಹಿಳೆಯರಿಗೆ ಫ್ರೀ ಇತ್ತ ಪುರುಷರ ಜೇಬಿಗೆ ಕತ್ತರಿ ಹಾಕಿದ್ದಾರೆಂದು ಹೇಳಿ, ನಮ್ಮ ಸರ್ಕಾರವಿದ್ದಾಗಲೇ ಪಿಎಸ್‌ಐ ನೇಮಕಾತಿ ಹಗರಣವನ್ನು ಸಿಓಡಿಗೆ ಒಪ್ಪಿಸುವ ಮೂಲಕ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಪ್ರಕರಣದಲ್ಲಿದ್ದ ಹಲವರನ್ನು ಬಂಧಿಸಲಾಗಿದ್ದು ತನಿಖೆ ಪೂರ್ಣವಾಗುತ್ತಿರುವಾಗಲೇ ಕಾಂಗ್ರೆಸ್ ಪಕ್ಷದ ಕೆಲವು ಸಚಿವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಾಗಿ ಇಲ್ಲದ ಆರೋಪ ಮಾಡುತ್ತಿದ್ದಾರೆ. ಹಾಗಾರದೇ ಅವರದೇ ಸರ್ಕಾರವಿದೆ ತನಿಖೆ ನಡೆಸಲಿ ತಟ್ಟಿ ಬಡಿದು ಹೆದರಿಸುವ ಅಗತ್ಯವಿಲ್ಲ ಎದುರಿಸಲು ನಾವುಗಳು ಸಿದ್ದರಾಗಿದ್ದೇವೆಂದು ಸವಾಲು ಹಾಕಿದರು.

ಬರುವ ಜುಲೈ 3 ರಿಂದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಪಕ್ಷದ ಮುಖಂಡರಾದ ಎಂ.ಸುರೇಶಸಿಂಗ್, ಕಗ್ಗಲಿ ನಿಂಗಪ್ಪ, ಸುಂದರೇಶ್, ದೇವರಾಜ್‌ ಕೆರೆಹಳ್ಳಿ, ಮಹೇಶ ಮಾಣಿಕರೆ, ಸುಧೀಂದ್ರ ಪೂಜಾರಿ, ರಾಮು ಬಳೆಗಾರ,
ಸುಧೀಂದ್ರ ಹೆಬ್ಬಾರ್, ಬಿ.ಎನ್.ಆಶೋಕ, ವಾಸುದೇವ ಮಂಗಳರ‍್ಕರು ಇನ್ನಿತರರಿದ್ದರು.

Leave A Reply

Your email address will not be published.

error: Content is protected !!