ಶಿವಮೊಗ್ಗ: ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಸಿಇಐಆರ್ (ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಸಿ ರಿಜಿಸ್ಟರ್) ಪೋರ್ಟಲ್ ಅನ್ನು ದೂರ ಸಂಪರ್ಕ ಇಲಾಖೆಯು ಅಭಿವೃದ್ದಿ ಪಡಿಸಿದ್ದು, ಸದರಿ ಪೋರ್ಟಲ್‌ನ ಸಹಾಯದಿಂದ ನಿಮ್ಮ ಮೊಬೈಲ್ ಕಳೆದು ಹೋದಲ್ಲಿ ನೀವು ಮನೆಯ ಕುಳಿತುಕೊಂಡು ಪತ್ತೆ ಹಚ್ಚಬಹುದು ಎಂದು ಜಿ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಹೇಳಿದರು.
ಅವರು ಇಂದು ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಪತ್ತೆಹಚ್ಚಲಾದ ಮೊಬೈಲ್ ಫೋನ್‌ಗಳನ್ನು ಸಂಬಂಧಪಟ್ಟ ಮಾಲಿಕರಿಗೆ ಹಿಂದಿರುಗಿಸುವ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಮೊಬೈಲ್ ಕಳೆದು ಹೋದಾಗ ಎಫ್‌ಐಆರ್ ಮಾಡುವ ಅವಶ್ಯಕತೆ ಇಲ್ಲ. ಸಿಇಐಆರ್ ಪೋರ್ಟಲ್‌ಗೆ ಹೋಗಿ ನಿಮ್ಮ ಆಧಾರ್ ಹಾಗೂ ಮೊಬೈಲ್ ವಿವರಗಳನ್ನು ನಮೂದಿಸಿದಾಗ ಮೊಬೈಲ್ ಕದ್ದ ವ್ಯಕ್ತಿ ಬೇರೆಯವರಿಗೆ ಮಾರಾಟ ಮಾಡಿದಾಗ ಅಥವಾ ನೀವು ಕಳೆದುಕೊಂಡ ಮೊಬೈಲ್‌ಗೆ ಯಾವುದೇ ಸಿಮ್ ಹಾಕಿದರೂ ಲೊಕೇಶನ್ ಕೂಡಲೇ ನಿಮಗೆ ತಿಳಿಯುತ್ತದೆ. ಪೊಲೀಸರಿಗೆ ನೀವು ಮಾಹಿತಿ ನೀಡಿದರೆ ಅವರು ಜವಾಬ್ದಾರಿಯಿಂದ ನಿಮ್ಮ ಮೊಬೈಲ್ ಪತ್ತೆಹಚ್ಚಿ ಹಿಂದಿರುಗಿಸುತ್ತಾರೆ. ಈ ಪೋರ್ಟ್‌ಲ್ ಸಹಾಯದಿಂದ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆ ನಿರೀಕ್ಷಕರ ನೇತೃತ್ವದ ತಂಡ 100ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪತ್ತೆ ಮಾಡಿದ್ದು, ಇಂದು ಹಿಂದಿರುಗಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮೊಬೈಲ್ ಕಳೆದುಕೊಂಡ ಕೇಸು ದಾಖಲಾಗಿದ್ದು, 144 ಮೊಬೈಲ್ ಅನ್ನು ರಿಕವರಿ ಮಾಡಲಾಗಿದೆ. ಕೆಲವರು ಮೊಬೈಲ್ ಕಳೆದುಕೊಂಡು ಸಿಗುವುದಿಲ್ಲ ಎಂದು ಭಾವಿಸಿದ್ದರು. ಅಂತಹ ಮೊಬೈಲ್ ಕೂಡ ಈ ಪೋರ್ಟಲ್ ಸಹಾಯದಿಂದ ದೊರೆತಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿ ರಕ್ಷಣಾಧಿಕಾರಿ ಅನಿಲ್ ಭೂಮರೆಡ್ಡಿ, ಸಿಇಎನ್ ಠಾಣೆಯ ನಿರೀಕ್ಷಕರಾದ ಸಂತೋಷ್ ಕುಮಾ ರ್ ಪಾಟೀಲ್, ಎಎಸ್‌ಐ ವಿರೂಪಾಕ್ಷ ಮೊದಲಾದವರಿದ್ದರು.