ಅರಳಸುರಳಿ ಪ್ರಕರಣ ; ಚಿಕಿತ್ಸೆ ಫಲಿಸದೇ ಭರತ್ ಆಸ್ಪತ್ರೆಯಲ್ಲಿ ಸಾವು !

0 2,157

ತೀರ್ಥಹಳ್ಳಿ : ಭಾನುವಾರ ಬೆಳ್ಳಂಬೆಳಗ್ಗೆ ಮನೆಯೊಂದರಲ್ಲಿ ಮೂರು ಮಂದಿ ಸಜೀವ ದಹನವಾಗಿದ್ದ ಘಟನೆ ತಾಲೂಕಿನ ಅರಳಸುರುಳಿಯಲ್ಲಿ ನಡೆದಿತ್ತು.

ಮನೆಯ ಒಳಗಿನ ಕೋಣೆಯೊಳಗೆ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ದಹನವಾಗಿದ್ದರು. ಶೇ. 50 ರಷ್ಟು ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಪುತ್ರ ಭರತ್ (28) ಕೂಡ ಚಿಕಿತ್ಸೆ ಫಲಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ವಾಟ್ಸಾಪ್ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಒಂದೇ ಕುಟುಂಬದ ನಾಲ್ವರು ಕೂಡ ಸಾವನ್ನಪ್ಪಿದ್ದು ಸಾವಿಗೆ ನಿಖರವಾದ ಕಾರಣ ಇಲ್ಲಿಯವರೆಗೆ ತಿಳಿದುಬಂದಿಲ್ಲ.

Leave A Reply

Your email address will not be published.

error: Content is protected !!