ಮೀನು ಕೃಷಿ ತರಬೇತಿ ಕಾರ್ಯಕ್ರಮ | ಮೀನು ಕೃಷಿಯಿಂದ ಆರ್ಥಿಕವಾಗಿ ಹೆಚ್ಚಿನ ಲಾಭ ಪಡೆಯುವಂತೆ ಸಲಹೆ

0 256

ಸಾಗರ: ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮತ್ತು ಒಳನಾಡು ಮೀನುಗಾರಿಕೆ ವಿಭಾಗ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಮೀನು ಕೃಷಿ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಮೀನು ಕೃಷಿ ತರಬೇತಿ ಕಾರ್ಯಕ್ರಮವನ್ನು ಡಾ. ಮಂಜಪ್ಪ ಕೆ. ನಿವೃತ್ತ ಪ್ರಾಧ್ಯಾಪಕರು, ಒಳನಾಡು ಮೀನುಗಾರಿಕೆ ವಿಭಾಗ ಶಿವಮೊಗ್ಗ ಇವರು ಉದ್ಘಾಟಿಸಿ ಮಾತನಾಡಿ, ರೈತರು ಮೀನುಗಾರಿಕೆ ತರಬೇತಿಗಳಲ್ಲಿ ಭಾಗವಹಿಸಿ ವೈಜ್ಞಾನಿಕ ಮೀನುಗಾರಿಕೆ ಬಗ್ಗೆ ಮಾಹಿತಿಯನ್ನು ಪಡೆದು ತಮ್ಮ ಜಲಸಂಪನ್ಮೂಲಗಳಲ್ಲಿ ಮೀನುಗಾರಿಕೆಯನ್ನು ಕೈಗೊಂಡಲ್ಲಿ ಆರ್ಥಿಕವಾಗಿ ಹೆಚ್ಚಿನ ಲಾಭವನ್ನು ಪಡೆಯವಂತೆ ಸಲಹೆ ನೀಡಿದರು.

ಈ ತರಬೇತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಕುಮಾರ್‌, ಜಿ. ಎಂ. ಉಪ ನಿರ್ದೇಶಕರು ಮೀನುಗಾರಿಕೆ ಇಲಾಖೆ, ಶಿವಮೊಗ್ಗ ಇವರು, ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ, ಮೀನುಗಾರಿಕೆಯಲ್ಲಿರುವ ವಿವಿಧ ನವೀನ ತಂತ್ರಜ್ಞಾನಗಳನನ್ನು ಮೀನುಗಾರರು ಅಳವಡಿಸಿಕೊಂಡು ಆರ್ಥಿಕ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಶಶಿಧರ್‌ ಕೆ.ಸಿ. ವಿಶೇಷ ಅಧಿಕಾರಿಗಳು ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಮತ್ತು ಕುಲಸಚಿವರು, ಕೆ. ಶಿ.ನಾ.ಕೃ.ತೋ.ವಿ.ವಿ. ಶಿವಮೊಗ್ಗ ಇವರು, ಬ್ರಹ್ಮಾವರದ ರೈತನೊಬ್ಬ ಸಿಗಡಿ ಕೃಷಿಯಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಲಾಭ ಮಾಡಿರುವ ದೃಷ್ಟಾಂತವನ್ನು ವಿವರಿಸಿ, ರೈತರು ಇದೇ ತರಹ ತಮ್ಮ ಮೀನುಗಾರಿಕೆ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮೀನುಗಾರಿಕೆಯನ್ನು ಉಪಕಸುಬಾಗಿ ಕೈಗೊಳ್ಳದೇ ಮುಖ್ಯ ಕಸುಬಾಗಿ ಕೈಗೊಂಡು ಹೆಚ್ಚಿನ ಆರ್ಥಿಕ ಲಾಭ ಪಡೆಯವಂತೆ ಸಲಹೆ ನೀಡಿ ಹುರಿದುಂಬಿಸಿದರು.

ಡಾ. ಪ್ರಕಾಶ್‌ ಪವಾಡಿ, ಸಹಾಯಕ ಪ್ರಾಧ್ಯಾಪಕರು, ಒಳನಾಡು ಮೀನುಗಾರಿಕೆ ವಿಭಾಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡ ಮತ್ತು ನೀರು ಸಂಗ್ರಹಣಾ ಕೊಳಗಳಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ ಹೆಚ್ಚುವರಿಯಲ್ಲಿ ಆರ್ಥಿಕ ಲಾಭ ಪಡೆಯಬಹುದೆಂದು ತಿಳಿಸಿದರು.

ಡಾ. ದಿವ್ಯ. ವಿ. ಸಹಾಯಕ ಪ್ರಾಧ್ಯಾಪಕರು, ಪ್ರಾಣಿ ವಿಜ್ಞಾನ, ವಿಭಾಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ ಇವರು ಕ್ರಾರ್ಯಕ್ರಮದ ವಂದನಾರ್ಪಣೆಯನ್ನು ನೇರವೇರಿಸಿದರು.

ಡಾ. ಶಾಂತನಗೌಡ, ಸಹಾಯಕ ಪ್ರಾಧ್ಯಾಪಕರು, ಒಳನಾಡು ಮೀನುಗಾರಿಕೆ ವಿಭಾಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ ಮತ್ತು ಡಾ. ಪ್ರಕಾಶ್‌ ಪವಾಡಿ, ಸಹಾಯಕ ಪ್ರಾಧ್ಯಾಪಕರು, ಒಳನಾಡು ಮೀನುಗಾರಿಕೆ ವಿಭಾಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಇವರು ಕಾರ್ಯಕ್ರಮವನ್ನು ಆಯೋಜಿಸಿದರು.

ಈ ತರಬೇತಿಯಲ್ಲಿ ಶಿವಮೊಗ್ಗ, ಹೊಸನಗರ, ಶಿಕಾರಿಪುರ ಮತ್ತು ಸಾಗರ ತಾಲೂಕುಗಳಿಂದ ಒಟ್ಟು 50 ರೈತರು ಭಾಗವಹಿಸಿ ಕ್ರಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

ಪ್ರಥಮ ವರ್ಷದ ಅರಣ್ಯ ವಿಜ್ಞಾನದ ವಿದ್ಯಾರ್ಥಿ ಮಂಜುನಾಥ್‌ ರವರು ಕ್ರಾರ್ಯಕ್ರಮದ ನಿರೂಪಣೆ ಮಾಡಿದರು.

Leave A Reply

Your email address will not be published.

error: Content is protected !!