ರಾಮಚಂದ್ರಪುರ ಮಠದಲ್ಲಿ ವಿಶೇಷ ಅಲಂಕಾರವಿಲ್ಲದೆ ಎಂದಿನಂತೆ ನಡೆದ ಪೂಜೆ !

0 770

ಹೊಸನಗರ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನ ನಡೆಸುತ್ತಿರುವುದು ಹಿಂದುಗಳಿಗೆ ಹರ್ಷದಾಯಕವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ದೇಶದ ಪ್ರತೀ ದೇವಾಲಯ ಹಾಗೂ ಪ್ರತೀ ಮನೆಮನೆಯಲ್ಲಿ ರಾಮ‌ನಾಮ ಜಪ ಹಾಗೂ ದೀಪ ಬೆಳಗಿಸುವ ಮೂಲಕ ರಾಮನನ್ನು ಕೊಂಡಾಡುತ್ತಿರುವುದು ಸಂತೋಷದಾಯಕವಾಗಿದೆ. 

ಇದಕ್ಕಾಗಿ ಅನೇಕ ವಿದ್ಯಾಸಂಸ್ಥೆಗಳು ರಜೆ ಘೋಷಿಸಿ ವಿದ್ಯಾರ್ಥಿಗಳಿಗೆ ದೇವಸ್ಥಾನಗಳ ಮಠ ಮಂದಿರಗಳಿಗೆ ಹೋಗಲು ಅನುಕೂಲವಾಗುವಂತೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ದೇವಸ್ಥಾನಗಳಲ್ಲಿ ತಳಿರು ತೋರಣ, ಹೂವಿನ‌ ಅಲಂಕಾರದಿಂದ ದೇವಾಲಯವನ್ನು ಕಂಗೊಳಿಸುವಂತೆ ಮಾಡಿರುವುದು ದೃಶ್ಯ ಕಂಡು ಬರುತ್ತಿದೆ. ಅದೇ ರೀತಿ ಹೊಸನಗರ ಪಟ್ಟಣದ  ಗಣಪತಿ ಮಹೇಶ್ವರ ದೇವಸ್ಥಾನ, ಮಾವಿನಕೊಪ್ಪದ ಗವಿಗಂಗಾಧರೇಶ್ವರ ದೇವಸ್ಥಾನ, ಕೆ ಇ ಬಿ ಹತ್ತಿರದ ಆಂಜನೇಯ ದೇವಸ್ಥಾನ ಸೇರಿದಂತೆ ಜಯನಗರದ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ತಳಿರು ತೋರಣ, ಹೂವಿನ‌ ಅಲಂಕಾರದಿಂದ ಕಂಗೊಳಿಸುತ್ತಿದ್ದವು, ಅನೇಕ ದೇವಾಲಯಗಳಲ್ಲಿ ಆಗಮಿಸಿದಂತಹಾ ಭಕ್ತರಿಗೆ  ಪಾನಕ ಕೋಸಂಬರಿ ವಿತರಿಸಿರುವುದು ಭಕ್ತರಲ್ಲಿ ಹರ್ಷದಾಯಕವಾಗಿತ್ತು. 

ಆದರೆ ಅಂತರರಾಜ್ಯ ಮಟ್ಟದಲ್ಲಿ ಹೆಸರಿರುವ ಹೊಸನಗರ ತಾಲ್ಲೂಕಿನ ಶ್ರೀರಾಮಚಂದ್ರಾಪುರ ಮಠದಲ್ಲಿ ಎಂದಿನಂತೆ ಪೂಜೆ ನಡೆಸುತ್ತಿರುವುದು  ಭಕ್ತರಿಗೆ ಅಸಮಾಧಾನ ಉಂಟಾಗಿರುವುದರಲ್ಲಿ ಎರಡು ಮಾತಿಲ್ಲ‌. ಈ ಮಠದ ಧೈವ ಸಂಭೂತ ಗುರುಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಅಯೋಧ್ಯೆಗೆ ಹೋಗಿರುವುದು ಸಂತಸದ ವಿಷಯವಾದರೂ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸಾಂಪ್ರದಾಯಕ ಪೂಜೆ ಹೊರತು ಪಡಿಸಿ ಯಾವುದೇ ರೀತಿಯ ತಳಿರು ತೋರಣಗಳ ಹೂವಿನ ಅಲಂಕಾರಗಳಿಲ್ಲದೆ ಪೂಜೆ ನಡೆದಿದೆ.

ತಾಲ್ಲೂಕು‌ ಸೇರಿದಂತೆ ರಾಜ್ಯಾದ್ಯಂತ ಅನೇಕ ಭಕ್ತರ ಸಮೂಹವನ್ನು‌ ಹೊಂದಿರುವ ಈ ಮಠಕ್ಕೆ ಇಂದು ಹಿಂದೂ ಧರ್ಮದ ಅನೇಕ ರಾಮ ಭಕ್ತರು ಆಗಮಿಸಿ ಅಲಂಕಾರವಿಲ್ಲದ ದೇವಾಲಯವನ್ನು‌ ವೀಕ್ಷಣೆ ಮಾಡಿ ದೇವರಲ್ಲಿ ಕೈ ಮುಗಿದು ಅಸಮಾಧಾನದಿಂದ ವಾಪಾಸ್ ಆಗುತ್ತಿರುವ ದೃಶ್ಯ ಕಂಡು ಬಂದಿದೆ.

ಇಲ್ಲಿ ಎಂದಿನಂತೆ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದದ ರೀತಿಯಲ್ಲಿ ಅನ್ನದಾನ ನಡೆಯಿತಾದರೂ ಭಕ್ತರಲ್ಲಿ ಅಲಂಕಾರವಿಲ್ಲದ ದೇವಾಲಯವನ್ನು ವೀಕ್ಷಿಸುತ್ತಿರುವುದು ಬೇಸರದ ಸಂಗತಿಯಾಗಿತ್ತು.

Leave A Reply

Your email address will not be published.

error: Content is protected !!