ಹಣ್ಣು, ಹಸಿ ತರಕಾರಿ ಸೇವನೆಯಿಂದ ಗರ್ಭಿಣಿಯರಲ್ಲಿ ರಕ್ತಹೀನತೆ ದೂರ

0 156

ರಿಪ್ಪನ್‌ಪೇಟೆ: ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರು ಸೇರಿದಂತೆ ಇತರೆ ಎಲ್ಲರೂ ಪೌಷ್ಟಿಕಾಂಶದ ಹಣ್ಣು, ಹಸಿ ತರಕಾರಿ ಸೇವಿಸುವುದರಿಂದ ಉತ್ತಮ ಅರೋಗ್ಯದಿಂದ ಇರುವುದರೊಂದಿಗೆ ರಕ್ತ ಹೀನತೆಯಿಂದ ಮುಕ್ತರಾಗಲು ಸಾಧ್ಯವೆಂದು ಹೊಸನಗರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಅಧಿಕಾರಿ ಶಶಿರೇಖಾ ಕರೆ ನೀಡಿದರು.

ಮೂಗುಡ್ತಿ ಅಂಗನವಾಡಿ ಕೇಂದ್ರದಲ್ಲಿ ಅಯೋಜಿಸಲಾದ ಪೋಷಣ್ ಆಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ರೈತರು ರಾಸಾಯನಿಕ ಗೊಬ್ಬರ ಬಳಕೆಯಿಂದಾ ಆಹಾರದ ಬೆಳೆಗಳಲ್ಲಿ ಪೌಷ್ಟಿಕಾಂಶವೇ ಇಲ್ಲದೇ ಇರುವುದರಿಂದ ನಾವು ನಿತ್ಯ ವಿಷಯುಕ್ತ ಆಹಾರ ಸೇವಿಸುವಂತಾಗಿದೆ. ಆ ಕಾರಣ ಸಾವಯವ ಗೊಬ್ಬರದಲ್ಲಿ ಬೆಳೆದ ಪೌಷ್ಟಿಕಾಂಶದ ಹಣ್ಣು, ಹಸಿ ತರಕಾರಿ, ಗೆಡ್ಡೆ-ಗೆಣಸು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ನುಗ್ಗೆಕಾಯಿ ಇನ್ನಿತರ ಸೊಪ್ಪು ಬಳಸುವುದರಿಂದ ಉತ್ತಮ ಆರೋಗ್ಯದಿಂದಿರಲು ಸಾಧ್ಯವೆಂದರು.

ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ವನಿತಾ ಗಂಗಾಧರ್ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಾಲ ವಿಕಾಸ ಸಮಿತಿಯ ಆಧ್ಯಕ್ಷೆ ಜಯಂತಿ ಪ್ರದೀಪ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ವಿಶುಕುಮಾರ್, ಗುರುಗೌಡರ, ವಸಂತಮ್ಮ, ಯತೀಶ್, ಆರೋಗ್ಯ ಇಲಾಖೆಯ ರಾಘವೇಂದ್ರ, ಮುಖ್ಯೋಪಾಧ್ಯಾಯ ಉದಯಕುಮಾರ್, ಅಂಗನವಾಡಿ ಮೇಲ್ವಿಚಾರಕಿ ಚಂದ್ರಕಲಾ ಇನ್ನಿತರರು ಹಾಜರಿದ್ದರು.

ಮೂಗುಡ್ತಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಗಾಯಿತ್ರಿ ಸ್ವಾಗತಿಸಿದರು. ತಳಲೆ ಅಂಗನವಾಡಿ ಕಾರ್ಯಕರ್ತೆ ಕೃಪಾ ನಿರೂಪಿಸಿದರು. ಜಂಬಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಗಾಯಿತ್ರಿ ವಂದಿಸಿದರು.

Leave A Reply

Your email address will not be published.

error: Content is protected !!