ಗೃಹರಕ್ಷಕ ದಳದ ವತಿಯಿಂದ ಸಚಿವ ಮಧು ಬಂಗಾರಪ್ಪನವರಿಗೆ ಮನವಿ

0 47

ಸೊರಬ: ಸಭೆ ಮತ್ತು ವಾರದ ಕವಾಯತು ನಡೆಸಲು ಸರ್ಕಾರಿ ಕಟ್ಟಡದಲ್ಲಿ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಗೃಹರಕ್ಷಕದಳದ ವತಿಯಿಂದ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ‌ ಅವರಿಗೆ ಮನವಿ ಸಲ್ಲಿಸಲಾಯಿತು.

ಗೃಹ ರಕ್ಷಕದಳದ ಘಟಕಾಧಿಕಾರಿ ಬಿ. ರೇವಣಪ್ಪ ಮಾತನಾಡಿ, ಪೊಲೀಸ್ ಇಲಾಖೆಗೆ ಸಹಾಯಕವಾಗಿ ಗೃಹರಕ್ಷಕ ದಳದ ಸದಸ್ಯರು ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಅನೇಕ ತುರ್ತು ಸಂದರ್ಭದಲ್ಲಿ ನಿಷ್ಕರ್ಮ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ, ಪಟ್ಟಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಚೇರಿ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ ಎಂದರು.

ಮಳೆಗಾಲದಲ್ಲಿ ವಾರದ ಕವಾಯತು ಹಾಗೂ ಸಭೆ ನಡೆಸಲು ಕಷ್ಟವಾಗಿದೆ. ಘಟಕದ ದಾಖಲೆಗಳು ಪೀಠೋಪಕರಣಗಳನ್ನು ಇಡಲು ಸಹ ತೊಂದರೆಯಾಗಿದೆ. ತಾಲೂಕು ಕೇಂದ್ರದಲ್ಲಿ ಲಭ್ಯವಿರುವ ಯಾವುದಾದರೂ ಸರ್ಕಾರಿ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಸಚಿವ ಎಸ್. ಮಧು ಬಂಗಾರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರದಲ್ಲಿ ಗೃಹರಕ್ಷಕ ದಳದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಗೃಹರಕ್ಷಕದಳದ ಪ್ಲೇಟೋನ್ ಲೀಡರ್ ಬಿ.ಎನ್. ಗೋಪಾಲ್, ಜರೀಕೋತಾ, ಸಿ.ಆರ್. ದುರ್ಗಪ್ಪ, ಎನ್.ಬಿ. ನಾಗರಾಜ್, ಸೇರಿದಂತೆ ಘಟಕದ ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!