ಚೀನಾಕ್ಕೆ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ 67 ಕೆ.ಜಿ. ಚಿಪ್ಪು ಹಂದಿಯ ಚಿಪ್ಪು ವಶಕ್ಕೆ ! 18 ಮಂದಿ ಬಂಧನ !! ಬಂಧಿತ ಆರೋಪಿಗಳು ಎಲ್ಲಿನವರು ಗೊತ್ತಾ?

0
9598

ಶಿವಮೊಗ್ಗ/ಚಿಕ್ಕಮಗಳೂರು: ಇದು ಪಕ್ಕದ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ಸುದ್ದಿಯಾದ್ರು ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಮಾತ್ರ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯವರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು ಅದರಲ್ಲೂ ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನವರ ಸಂಖ್ಯೆಯೇ ಅಧಿಕವಾಗಿದೆ.

ಏನಿದು ಸುದ್ದಿ ಅಂದ್ರಾ?

ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿ (ಪ್ಯಾಂಗೋಲಿನ್) ವನ್ಯಜೀವಿಯ ಚಿಪ್ಪುಗಳನ್ನು ಮಾರಾಟ ಮಾಡಿ ಚೀನಾಕ್ಕೆ ಸಾಗಿಸುತ್ತಿದ್ದ 18 ಮಂದಿ ಆರೋಪಿಗಳನ್ನು ದಾವಣಗೆರೆ ಸಿಇಎನ್ ಅಪರಾಧ ಪೊಲೀಸರು ಹರಿಹರ ಹೊರವಲಯದ ಶಿವಮೊಗ್ಗ ರಸ್ತೆಯಲ್ಲಿ ನ. 03ರ ಬುಧವಾರ ಬಂಧಿಸಿದ್ದಾರೆ. ಆದರೆ ಈ ಸುದ್ದಿ ತಡವಾಗಿ ನಮ್ಮ ಕೈ ಸೇರಿದೆ.

ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ 67 ಕೆ.ಜಿ.700 ಗ್ರಾಂನಷ್ಟು ಪ್ಯಾಂಗೋಲಿನ್ ಚಿಪ್ಪುಗಳು, ಕೃತ್ಯಕ್ಕೆ ಬಳಸಿದ 2 ಓಮ್ನಿ ಹಾಗೂ 1 ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೂಲದವರಾಗಿದ್ದಾರೆ. ಮೂರು ವಾಹನಗಳಲ್ಲಿ ಪ್ಯಾಂಗೋಲಿನ್ ಚಿಪ್ಪುಗಳನ್ನು ತುಂಬಿಕೊಂಡು ಬೇರೆಡೆ ಮಾರಾಟಕ್ಕೆ ಸಾಗಿಸುತ್ತಿದ್ದರು.

ಖಚಿತ ಮಾಹಿತಿ ಆಧರಿಸಿ ಡಿಸಿಆರ್‌ಬಿ ಡಿವೈಎಸ್ಪಿ ಬಿ.ಎಸ್.ಬಸವರಾಜ ಮಾರ್ಗದರ್ಶನದಲ್ಲಿ ಸಿಐಎನ್ ಪೊಲೀಸ್ ನಿರೀಕ್ಷಕ ಬಿ.ವಿ.ಗಿರೀಶ ಹಾಗೂ ಸಿಬ್ಬಂದಿ ಹರಿಹರ ಸಮೀಪದ ಶಿವಮೊಗ್ಗ ರಸ್ತೆಯ ಶಿವಬಸವ ಡಾಬಾ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ 67 ಕೆಜಿ 700 ಗ್ರಾಂನಷ್ಟು ತೂಕದಷ್ಟು ಚಿಪ್ಪುಹಂದಿಯ ಚಿಪ್ಪುಗಳು ದೊರೆತಿದ್ದು, ಆರೋಪಿಗಳ ಹಿಂದೆ ವನ್ಯಜೀವಿಗಳ ಚಿಪ್ಪು, ದಂತ ಸೇರಿ ಅಪರೂಪದ ವನ್ಯ ಸಂಪತ್ತನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲವೇ ಇರುವ ಶಂಕೆ ವ್ಯಕ್ತವಾಗುತ್ತಿದೆ.

ಪ್ಯಾಂಗೋಲಿನ್ ಚಿಪ್ಪುಗಳನ್ನು ಚೀನಾದಲ್ಲಿ ಔಷಧ ಉತ್ಪಾದನೆಗೆ ಬಳಸಲಾಗುತ್ತದೆ. ಔಷಧ ರೂಪದಲ್ಲೂ ಚಿಪ್ಪು ಹಂದಿಯ ಚಿಪ್ಪುಗಳನ್ನು ಬಳಸುವುದು ಅಲ್ಲಿ ಹಿಂದಿನಿಂದಲೂ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಚಿಪ್ಪು ಹಂದಿಗಳನ್ನು ಬೇಟೆಯಾಡಿ, ಅವುಗಳ ದೇಹದಿಂದ ಚಿಪ್ಪುಗಳನ್ನು ಬೇರ್ಪಡಿಸಿ, ಚೀನಾಕ್ಕೆ ಮಾರಾಟ ಮಾಡುವ ಜಾಲ ಇದಾಗಿರುವ ಸಾಧ್ಯತೆಯೂ ಇದೆ.

ಎಷ್ಟೋ ವರ್ಷದಿಂದ ಈ ಜಾಲ ಮೂರೂ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು, ಈ ಜಾಲದ ಬೇರು ಎಲ್ಲೆಲ್ಲಿ ಹರಡಿವೆ ಎಂಬ ಬಗ್ಗೆ ಪೊಲೀಸರು ಇದೀಗ ಶೋಧ ಕಾರ್ಯ ಕೈಗೊಂಡಿದ್ದಾರೆ.

ಬಂಧಿತ ಆರೋಪಿಗಳ ವಿವರ:

1) ಪ್ರಜ್ವಲ್ ಯು.ಎಸ್ ತಂದೆ ಶ್ರೀನಾಥ್ (22) ಡ್ರೈವರ್ ಕೆಲಸ, ವಾಸ-ಉರತ್ತೆ, ಅಂಗಳ ಗುಂಡಿಗೆ ಗ್ರಾಮ, ಶೇಡ್ಗಾರು ಪೋಸ್ಟ್, ತೀರ್ಥಹಳ್ಳಿ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

2) ಮನೋಜ್ ಹೆಚ್.ಜೆ ತಂದೆ ಜಗದೀಶ್ (33), ವ್ಯವಸಾಯ ಕೆಲಸ ವಾಸ-ಹನುಮಕ್ಕ ಗ್ರಾಮ, ಕಳಸ ಹೋಬಳಿ, ಮೂಡಿಗೆರೆ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ.

3) ಅನೀಲ್ ಕುಮಾರ್ ಕೆ.ಸಿ ತಂದೆ ಚಂದ್ರಪ್ಪ ಕೆ.ವೈ, (32) ಆಟೋ ಡ್ರೈವರ್ ಕೆಲಸ ವಾಸ-ಶೆಡ್ಗಾರ್, ಪೋಸ್ಟ್, ತೀರ್ಥಹಳ್ಳಿ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

4) ಮಹೇಂದ್ರ ತಂದೆ ಗಂಗಾಧರ (47) ಡ್ರೈವರ್ ಕೆಲಸ, ವಾಸ-ಬಿದರಹಳ್ಳಿ ಗ್ರಾಮ, ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

5) ಸುಬ್ರಹ್ಮಣ್ಯ ವೈ.ಕೆ ತಂದೆ ಕೃಷ್ಣಮೂರ್ತಿ (26),ಕೂಲಿ ಕೆಲಸ ವಾಸ-ಯಳಗಲ್ಲು ಗ್ರಾಮ, ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

6) ಮಹೇಶ್‌ ತಂದೆ ಗೋಪಾಲ ಗೌಡ (35) ವ್ಯವಸಾಯ ಬಾವಿಕಟ್ಟೆ ಹತ್ತಿರ, ಕೋದೂರು ಗ್ರಾಮ ತೀರ್ಥಹಳ್ಳಿ ತಾಲ್ಲೂಕ್ ಶಿವಮೊಗ್ಗ ಜಿಲ್ಲೆ.

7) ಇಬ್ರಾಹಿಂ ತಂದೆ ಮಹಮದ್ ಗೌಸ್ (43), ಡ್ರೈವಿಂಗ್ ಕೆಲಸ ವಾಸ-ನ್ಯೂ ಮಂಡ್ಲಿ, 1ನೇ ಕ್ರಾಸ್, ಶಿವಮೊಗ್ಗ ನಗರ.

8) ಪ್ರಸನ್ನ ಎಂ.ಕೆ ತಂದೆ ಕೆ. ಕೃಷ್ಣಪ್ಪ (34), ಗಾರೆ ಕೆಲಸ ವಾಸ ಹನುಮಂತ ನಗರ, 2ನೇ ಕ್ರಾಸ್, ಶೃಂಗೇರಿ ಚಿಕ್ಕಮಗಳೂರು ಜಿಲ್ಲೆ.

9) ಮಂಜುನಾಥ ಹೆಚ್.ಜಿ ತಂದೆ ಗುರುಮೂರ್ತಿ, (35) ವೆಲ್ಡಿಂಗ್ ಕೆಲಸ ವಾಸ ಹುಗುಡಿ, ಕಮ್ಮಚ್ಚಿ ಗ್ರಾಮ, ಗರ್ತಿಕೆರೆ, ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

10) ರವಿ.ಜಿ ತಂದೆ ಗುಂಡಪ್ಪ (36) ಕೃಷಿ ಕೆಲಸ ವಾಸ-ಹೊರಬೈಲು, ಬೆಳ್ಳೂರು ಗ್ರಾಮ, ಹೊಸನಗರ, ಬೆಳ್ಳೂರು ಗ್ರಾಮ ಹೊಸನಗರ ತಾಲ್ಲೂಕ್ ಶಿವಮೊಗ್ಗ ಜಿಲ್ಲೆ.

11) ಸ್ವಾಮಿ ಎಂ ತಂದೆ ಮಂಜನಾಯ್ಕ (46) ಕೃಷಿ ಕೆಲಸ ವಾಸ-ಸಾರಗನಜಡ್ಡು, ಗುಬ್ಬಿಗಾ ಗ್ರಾಮ, ಹಾರೋಹಿತ್ತಲು ಪೋಸ್ಟ್, ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

12) ಚಂದ್ರಪ್ಪ ತಂದೆ ಕೃಷ್ಣಪ್ಪ ಗೌಡ (40) ವ್ಯವಸಾಯ ಕೆಲಸ ವಾಸ-ಹೆರಟೆ ಗ್ರಾಮ, ಮಾಸ್ತಿಕಟ್ಟೆ, ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

13) ಸುರೇಶ್‌ ತಂದೆ ಈರಣ್ಣಯ್ಯ (42) ಕೂಲಿ ಕೆಲಸ ವಾಸ-ಚಕ್ರಾನಗರ ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

14) ಗಣಪತಿ ಬಿ.ಸಿ ತಂದೆ ಚನ್ನನಾಯ್ಕ (32) ಕೂಲಿ ಕೆಲಸ ವಾಸ-ಬೆಣಕಿ, ತ್ರಿಣಿವೆ ಗ್ರಾಮ ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ.

15) ಮಾರುತಿ ತಂದೆ ಪಾಂಡುರಂಗನಾಯಕ್ (28) ಡ್ರೈವರ್ ಕೆಲಸ, ವಾಸ ಕುಂದಳ್ಳಿ ಗ್ರಾಮ, ಬೇರಂಕಿ ಪೋಸ್ಟ್ ಹೊನ್ನಾವರ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆ.

16) ಮನೋಜ್.ಎನ್ ತಂದೆ ನಾರಾಯಣ ನಾಯ್ಕ (27) ಡ್ರೈವಿಂಗ್ ಕೆಲಸ ವಾಸ-ಕಂಡೋಡಿ, ಪೋಸ್ಟ್ ನಗರ ಬಸ್ತಿಕೇರಿ ಗ್ರಾಮ & ಪೋಸ್ಟ್, ಹೊನ್ನಾವರ ತಾಲ್ಲೂಕ್ ಉತ್ತರ ಕನ್ನಡ.

17) ಸಂದೀಪ್ ಸೀತಾರಾಂ ನಾಯ್ಕ ತಂದೆ ಸೀತಾರಾಂ ಈರಪ್ಪನಾಯ್ಕ (23) ಡ್ರೈವಿಂಗ್ ಕೆಲಸ ವಾಸ-ಗೇರುಸೊಪ್ಪು ಕಂಡೋಡಿ ಗ್ರಾಮ ಹೊನ್ನಾವರ ತಾಲ್ಲೂಕ್ ಉತ್ತರ ಕನ್ನಡ.

18) ಪ್ರಸಾದ್ ತಂದೆ ಜಗದೀಶ (20), ಡ್ರೈವಿಂಗ್ ಕೆಲಸ ವಾಸ ಮಳೂರು ಕಿಗ್ಗಾ ಗ್ರಾಮ ಮತ್ತು ಪೋಸ್ಟ್ ಶೃಂಗೇರಿ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ.

19) ಗುರುಮೂರ್ತಿ ಶೇಡ್ಗಾರ್, ತೀರ್ಥಹಳ್ಳಿ ತಾಲ್ಲೂಕು (ತಲೆಮರೆಸಿಕೊಂಡಿರುತ್ತಾನೆ).

ಬಂಧಿತ ಆರೋಪಿಗಳ ವಿರುದ್ಧ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಡಬ್ಲ್ಯುಎಲ್ಓಆರ್ 30.01/2021 500-9, 39, 44, 49, 49 ಬಿ, 51 ವನ್ಯ ಜೀವಿ ಸಂರಕ್ಷಣಾ ಕಾಯ್ದೆ-1972ರಡಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ 18 ಮಂದಿ ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here