ವಿಜಯದಶಮಿಯಂದು ನವಚಂಡಿಕಾ ಹೋಮ ಸಂಪನ್ನ

0
511

ರಿಪ್ಪನ್‌ಪೇಟೆ: ಇಲ್ಲಿನ ಪುರಾಣ ಪ್ರಸಿದ್ದ ವರಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶರನ್ನವರಾತ್ರಿಯ ಮಹೋತ್ಸವ ಮತ್ತು ದೇವಿಯ ಪಾರಾಯಣ ಹಾಗೂ ನವಚಂಡಿಕಾ ಹೋಮವು ಶ್ರದ್ದಾಭಕ್ತಿಯಿಂದ ಸಂಪನ್ನಗೊಂಡಿತು.

ನಂತರ ನವಚಂಡಿಕಾ ಹೋಮ ಪೂರ್ಣಾಹುತಿ ಮತ್ತು ಸಿದ್ದಿವಿನಾಯಕ ಸ್ವಾಮಿಗೆ ಮತ್ತು ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥ-ಪ್ರಸಾದ ವಿತರಣೆಯೊಂದಿಗೆ ಸಾರ್ವಜನಿಕರಿಗೆ ಸಾಮೂಹಿಕ ಅನ್ನ ಸಂತರ್ಪಣೆ ನೆರವೇರಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಗುರುರಾಜ್‌ಭಟ್, ಚಂದ್ರಶೇಖರ ಭಟ್, ಧರ್ಮದರ್ಶಿಗಳಾದ ಗಣೇಶ್‌ ಎನ್.ಕಾಮತ್, ಎಂ.ಡಿ.ಇಂದ್ರಮ್ಮ, ಎನ್.ಸತೀಶ್, ಸುಧೀಂದ್ರ ಪೂಜಾರಿ, ಆರ್.ಈ.ಈಶ್ವರ, ಜಯಲಕ್ಷ್ಮಿ ಮೋಹನ್, ಆರ್.ರಾಘವೇಂದ್ರ, ರಾಜೇಶ್, ಅರವಿಂದ, ಚಂದ್ರುಬಾಬು, ವನಮಾಲಾ, ಸರಸ್ವತಿ ರಾಘವೇಂದ್ರ, ನಾಗರತ್ನದೇವರಾಜ್, ಸುಧೀಂದ್ರ ಹೆಬ್ಬಾರ್, ದೀಪಾ ಹೆಬ್ಬಾರ್ ಇನ್ನಿತರ ಹಲವರು ಹಾಜರಿದ್ದರು.

ಕವಲೆದುರ್ಗ ಮಾರಿಕಾಂಬ ದೇವಸ್ಥಾನ:

ಇತಿಹಾಸ ಪ್ರಸಿದ್ದ ಕವಲೆದುರ್ಗದ ಶ್ರೀಮಾರಿಕಾಂಬ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ವಿಶೇಷ ಪುಜಾ ಕಾರ್ಯಕ್ರಮವು ಸಂಭ್ರಮದೊಂದಿಗೆ ಜರುಗಿತು.

ಕವಲೆದುರ್ಗ ಭುವನಗಿರಿ ಸಂಸ್ಥಾನಮಠದ ಷ.ಬ್ರ.ಮರಳಸಿದ್ದ ಶಿವಾಚಾರ್ಯ ಮಹಾಸ್ವಾಮಿಜಿ ದೇವಿಗೆ ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ, ದುಷ್ಟ ಶಕ್ತಿಯನ್ನು ದೂರ ಮಾಡಿ ಭಕ್ತರನ್ನು ಸನ್ಮಾರ್ಗದಲ್ಲಿ ನಡೆದುಕೊಳ್ಳುವಂತೆ ದೇವಿ ಹರಸು ತಾಯಿ ಎಂದು ಪ್ರಾರ್ಥಿಸಿದ ಅವರು ದೇವಿಯ ನಾಮವಳಿಯನ್ನು ಭಕ್ತಸಮೂಹಕ್ಕೆ ಪ್ರಚಾರಪಡಿಸಿ ಪಠಣ ಮಾಡಿಸಿದರು.

ಈ ಸಂದರ್ಭದಲ್ಲಿ ಮಾರಿಕಾಂಬ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಗೌರವಾಧ್ಯಕ್ಷ ರುದ್ರಪ್ಪ, ಅಧ್ಯಕ್ಷ ತಿಮ್ಮಪ್ಪಗೌಡ ಇನ್ನಿತರ ಹಲವರು ಹಾಜರಿದ್ದರು.

ಕೋಣಂದೂರು ಬಸವಣ್ಣ ದೇವಸ್ಥಾನ:

ಉದ್ಭವ ಬಸವಣ್ಣ ದೇವರ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಅಂಗವಾಗಿ ಬಸವಣ್ಣ ದೇವರ ಉತ್ಸವ ವಿಜಯದಶಮಿ ಸಂಭ್ರಮ ಸಡಗರದೊಂದಿಗೆ ಜರುಗಿತು.

ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರು ಆಶೀರ್ವಚನ ನೀಡಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಮಹತ್ತರ ಸ್ಥಾನವಿದ್ದು ಭಾರತೀಯ ಸಂಸ್ಕಾರ ಸಂಸ್ಕೃತಿಯ ಸಂಕೇತ ಎಂದ ಅವರು ಹೆಣ್ಣುಮಕ್ಕಳಿಗೆ ಎಲ್ಲಿ ಗೌರವ ಸಿಗುವುದಿಲ್ಲವೋ ಅಲ್ಲಿ ಅವನತಿ ಹೊಂದುವುದು ಖಚಿತವಾಗಿದೆ. ವಿಶ್ವದಲ್ಲಿ ಹೆಣ್ಣುಮಕ್ಕಳಿಗೆ ಪೂಜನೀಯ ಸ್ಥಾನವಿದೆ ಈ ಹಿನ್ನಲೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ದುರ್ಗಾದೇವಿಯರನ್ನು ಅರಾಧಿಸುವುದು ವಿಶೇಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಉದ್ಯಮಿ ಕೆ.ಆರ್.ಪ್ರಕಾಶ್, ಕುಟುಂಬದವರು ದೇವಸ್ಥಾನ ಸೇವಾ ಸಮಿತಿಯರು ಸೇರಿದಂತೆ ಸುತ್ತಮುತ್ತಲಿನ ರೈತ ನಾಗರೀಕರು ಭಾಗವಹಿಸಿ ಬನ್ನಿ ಮುಡಿದು ಸಂಭ್ರಮಿಸಿದರು.

ವಿನಾಯಕ ನಗರದ ದುರ್ಗಾಪರಮೇಶ್ವರಿ ದೇವಿ ಬರುವೆ ಚೌಡೇಶ್ವರಿದೇವಿ, ರಕ್ತೇಶ್ವರಿ ನಾಗಸನ್ನಿಧಿಯಲ್ಲಿ, ವಡಗರೆಯ ತುಳಜಾಭವಾನಿ ದೇವಸ್ಥಾನದಲ್ಲಿ, ಕೋಡೂರು ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಸನ್ನಿಧಿಯಲ್ಲಿ, ಕೆರೆಹಳ್ಳಿ ಅಂಬಾಭವಾನಿ ದೇವಸ್ಥಾನದಲ್ಲಿ, ಹೆದ್ದಾರಿಪುರ ಮಾಸ್ತಯಮ್ಮ ದೇವಿ, ಹಾರೋಹಿತ್ತಲು ಶ್ರೀಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಅಲಸೆ ಚಂಡಿಕೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಮೂಗುಡ್ತಿ ಬಲಮುರಿ ಗಣಪತಿ ಸನ್ನಿಧಿಯಲ್ಲಿ ಹೀಗೆ ವಿವಿಧಡೆಯಲ್ಲಿ ವಿಜಯದಶಮಿಯ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದೊಂದಿಗೆ ನೆರವೇರಿತು.

ಜಾಹಿರಾತು

LEAVE A REPLY

Please enter your comment!
Please enter your name here