ಹೆಲ್ಮೆಟ್ ಇಲ್ಲದೆ ಪಾನಮತ್ತನಾಗಿ ಬೈಕ್ ಚಲಾಯಿಸಿದವನಿಗೆ ದಂಡ ವಿಧಿಸಿದ ಹೊಸನಗರ ನ್ಯಾಯಾಲಯ !

0
1739

ಹೊಸನಗರ : ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ನಾಗರಕೊಡುಗೆಯ ರಮೇಶ ಬಿನ್ ಹುಚ್ಚನಾಯಕ ಎಂಬುವವನು ಹೆಲ್ಮೆಟ್ ಇಲ್ಲದೆ ಪಾನಮತ್ತನಾಗಿ ತನ್ನ ಬಜಾಜ್ ಡಿಸ್ಕವರ್ ಬೈಕ್ ಅನ್ನು ಅಜಾಗರುಕತೆಯಿಂದ ಚಲಿಸುತ್ತಿರುವ ವೇಳೆ ಹೊಸನಗರ ಪೊಲೀಸರು ತಪಾಸಣೆ ನಡೆಸಿದಾಗ ಆತನು ಪಾನಮತ್ತನಾಗಿದ್ದ ಕಾರಣ ಆತನ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಕಾರಣಕ್ಕಾಗಿ ಪ್ರಕರಣ ದಾಖಲಿಸಿ ಹೊಸನಗರ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ವಿಚಾರಣೆ ನಡೆಸಿದ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ಕೆ ರವಿಕುಮಾರ್ ಅವರು, ಆರೋಪಿಗೆ ಪಾನಮತ್ತನಾಗಿ ಬೈಕ್ ಚಲಾಯಿಸಿರುವುದಕ್ಕಾಗಿ 10,000 ರೂ. ಹಾಗೂ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿರುವುದಕ್ಕೆ 500 ರೂ.ಗಳ ದಂಡ ವಿಧಿಸಿರುವುದಾಗಿ ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here