ಹೊಸನಗರದಲ್ಲಿ ಅತ್ಯಧಿಕ 17 ಸೆಂ.ಮೀ. ಮಳೆ! ಲಿಂಗನಮಕ್ಕಿ ಜಲಾಶಯ ಭರ್ತಿಗೆ ಐದೂವರೆ ಅಡಿ ನೀರು ಬಾಕಿ

0
565

ಹೊಸನಗರ : ಮಲೆನಾಡಿನಲ್ಲಿ ಪುಬ್ಬ ಮಳೆಯ ಅಬ್ಬರ ಜೋರಾಗಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ಬುಧವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರದಲ್ಲಿ ಅತ್ಯಧಿಕ 168.4 ಮಿ.ಮೀ. ಮಳೆಯಾಗಿದೆ.

ಉಳಿದಂತೆ ಸಾವೇಹಕ್ಲು 92, ಶರಾವತಿ ವಿದ್ಯುದಾಗಾರ ಪ್ರದೇಶ 82.5, ಹುಲಿಕಲ್ 79, ಮಾಸ್ತಿಕಟ್ಟೆ 78, ಯಡೂರು 74, ಮಾಣಿ 72 ಮತ್ತು ಲಿಂಗನಮಕ್ಕಿಯಲ್ಲಿ 44.8 ಮಿ.ಮೀ. ಮಳೆ ದಾಖಲಾಗಿದೆ.

ರಾಜ್ಯದ ಪ್ರಮುಖ ಜಲಾಶಯವಾದ ಲಿಂಗನಮಕ್ಕಿ ಡ್ಯಾಂ ಭರ್ತಿಯಾಗಲು ಇನ್ನು ಐದೂವರೆ ಅಡಿ ನೀರು ಅವಶ್ಯಕತೆಯಿದ್ದು ಜಲಾಶಯಕ್ಕೆ 15037 ಕ್ಯೂಸೆಕ್ ನೀರು ಹರಿದುಬರುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here