ಹೊಸನಗರ: ಗ್ರಾಪಂ ಸದಸ್ಯನ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಪ್ರಶ್ನಿಸಿದ್ದಕ್ಕೆ ದಲಿತನ ಮೇಲೆ ಹಲ್ಲೆ..! ಕೇಸ್ ದಾಖಲು

0
2582

ಹೊಸನಗರ: ಸೊನಲೆ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್‌ರವರು ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದಾರೆ‌. ಅವರು ಸೊನಲೆ ಗ್ರಾಮ ಪಂಚಾಯಿತಿ ಸದಸತ್ವವನ್ನು ರದ್ದುಪಡಿಸಬೇಕೆಂದು ಚುನಾವಣೆ ಆಯೋಗಕ್ಕೆ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೊನಲೆ ಸೊಸೈಟಿಯ ಅಧ್ಯಕ್ಷ ಸುರೇಶ್ ಎಂಬುವವರು ಅರ್ಜಿ ಸಲ್ಲಿಸಿದ್ದು ಅರ್ಜಿ ಸಲ್ಲಿಸಿರುವ ವಿಷಯಕ್ಕೆ ನನ್ನ ಮೇಲೆ ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಸೊನಲೆ ಕೃಷಿ ಪತ್ತಿ ಸಹಕಾರ ಸೊಸೈಟಿಯ ಮುಂಭಾಗ ಗ್ರಾಮ ಪಂಚಾಯಿತಿಯ ಸದಸ್ಯ ಸತೀಶ್, ಪ್ರಕಾಶ್‌ಶೆಟ್ಟಿ, ಪ್ರವೀಣ್ ಶೆಟ್ಟಿಯವರು ಹಲ್ಲೆ ನಡೆಸಿದ್ದಾರೆ ಎಂದು ಹೊಸನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸೊನಲೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಸತೀಶ್ ಎನ್‌. ರವರು ಚುನಾವಣೆಯ ಪೂರ್ವದಲ್ಲಿ ಕೊಳಗಿ ಗ್ರಾಮದ ಪದ್ಮಪ್ಪ, ಸುಬ್ರಹ್ಮಣ್ಯ ಮನೆಯ ಹತ್ತಿರ ಸಾರ್ವಜನಿಕ ಕುಡಿಯುವ ನೀರಿನ ಬಾವಿ,16216 ರೂ. ಗಳನ್ನು ಸೊನಲೆ ಗ್ರಾಮದ ಗುಲಾಬಿ, ಪ್ರಕಾಶ ಮತ್ತು ಇತರರ ಮನೆಯ ಹತ್ತಿರ ಸಾರ್ವಜನಿಕರ ಬಾವಿಯ ನಿಮಾಣ ಕಾಮಗಾರಿಗೆ 23341 ರೂ.ಗಳು, ಗ್ರಾಮ ಪಂಚಾಯಿತಿ ಇತರೆ 9014 ಮತ್ತು 4068ರೂ.ಗಳ ಗ್ರಾಮ ಪಂಚಾಯಿತಿಯ ಗುತ್ತಿಗೆದಾರರಾಗಿ ಕೆಲಸ ಮಾಡಿರುತ್ತಾರೆ. ಆದರೆ ಚುನಾವಣೆಗೆ ಸ್ಪರ್ಧಿಸುವಾಗ ಚುನಾವಣೆಯ ಆಯೋಗಕ್ಕೆ ಇವುಗಳ ಲೆಕ್ಕ ನೀಡಿರಲಿಲ್ಲ ಈ ಎಲ್ಲ ಕಾಮಗಾರಿಯ ಹಣ 2021ರ ಜ.27ರಂದು ಸತೀಶ್‌ರವರ ಖಾತೆಗೆ ಹಣ ಜಮಾವಾಗಿರುತ್ತದೆ.

ಒಬ್ಬ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಚುನಾವಣೆಯ ಆಯೋಗಕ್ಕೆ ಯಾವುದೇ ಬಾಕಿ ತೋರಿಸದೆ ಬ್ಯಾಂಕಿನ ಖಾತೆಗೆ ಜಮಾವಾಗಿರುವುದನ್ನು ಪ್ರಶ್ನಿಸಿ ಅಧಿಕಾರಿಗಳಿಗೆ ದೂರನ್ನು ಸೊನಲೆ ಸೊಸೈಟಿಯ ಅಧ್ಯಕ್ಷ ಸುರೇಶ್‌ರವರು ಸಲ್ಲಿಸಿದ್ದರು. ಈ ಕಾರಣದಿಂದಲೇ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ

ಬಿಜೆಪಿ ಮುಖಂಡರ ಕುಮ್ಮಕು?:

ಗ್ರಾಮ ಪಂಚಾಯಿತಿಯ ಸದಸ್ಯ ಸತೀಶ್‌ರವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್‌ರವರ ಶಿಷ್ಯನಾಗಿದ್ದು ಗ್ರಾಮ ಪಂಚಾಯಿತಿಯ ಸದಸ್ಯತ್ವ ರದ್ದುಪಡಿಸಲು ತಡೆ ಮಾಡಲು ಹಾಗೂ ಸುರೇಶ್‌ರವರ ಮೇಲೆ ಹಲ್ಲೆ ನಡೆಸಲು ಬಿಜೆಪಿಯ ಎಲ್ಲ ಮುಖಂಡರ ಬೆಂಬಲದಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಹೊಸನಗರದ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 324, 504,506 ಎಸ್ಸಿ,ಎಸ್ಟಿ ಆಕ್ಟ್ ಅಡಿ ಕೇಸು ದಾಖಲಿಸಲಾಗಿದ್ದು ಪೊಲೀಸರು ತನಿಖೆ ಕಾರ್ಯ ಕೈಗೊಂಡಿದ್ದಾರೆ.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here