ಹೊಸನಗರ: ಹನಿಯ ಬಳಿ ತಿರುವಿನಲ್ಲಿ ಬೈಕ್ ಸ್ಕಿಡ್ಡಾಗಿ ಹೊಂಡಕ್ಕೆ ಬಿದ್ದು ಸವಾರ ಸ್ಥಳದಲ್ಲೇ ಸಾವು !

0
4029

ಹೊಸನಗರ: ತಾಲೂಕಿನ ಅರೋಡಿ ಕೊಡಸೆಯಿಂದ ಹೊಸನಗರ ಕಡೆ ಬೈಕಿನಲ್ಲಿ ಬರುತ್ತಿರುವಾಗ ಹೆದಲಿ ಬಳಿ ತಿರುವಿನಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 766c ರಸ್ತೆಯ ಬಳಿ ಹೊಂಡಕ್ಕೆ ಬಿದ್ದ ಪರಿಣಾಮ ಬೈಕ್ ಸವಾರ ಕೊಡಸೆಯ ನಾಗರಾಜ (45) ಎಂಬುವವರು ಹೊಂಡಕ್ಕೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ತೀವ್ರ ರಕ್ತ ಸ್ರಾವವಾದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ತಾಲೂಕಿನಾದ್ಯಂತ ಭಾರಿ ಮಳೆ ಬೀಳುತ್ತಿದ್ದ ಪರಿಣಾಮ ರಸ್ತೆಯಂಚಿನಲ್ಲಿ ದ್ವಿಚಕ್ರ ವಾಹನ ಚಲಾಯಿಸುವುದು ಹರಸಾಹಸ ಮಾಡಿದಂತೆ. ರಸ್ತೆಯಂಚಿನಲ್ಲಿ ಕೆಸರು ಇಲ್ಲವೇ ಅರ್ಧ ಮುಕ್ಕಾಲು ಅಡಿ ಅಂತರವಿದೆ. ಅಪಘಾತಕ್ಕೀಡಾದ ನಾಗರಾಜ ಸಹ ರಸ್ತೆಯಂಚಿನ ಅವ್ಯವಸ್ಥೆ, ಮಳೆ ಹಾಗೂ ತಿರುವು ಇವುಗಳ ಪರಿಣಾಮ ದುರಂತ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ‌.

ಮೃತ ನಾಗರಾಜನ ಪತ್ನಿ ಆಶಾ ಕಾರ್ಯಕರ್ತೆ ರೇಖಾ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಈ ಘಟನೆ ಸಂಬಂಧ ಹೊಸನಗರ ಪೊಲೀಸರು ಮಹಜರು ಕ್ರಮ ಜರುಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here