ಶಿವಮೊಗ್ಗ ; ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಆಯನೂರು-ರಿಪ್ಪನ್‌ಪೇಟೆ ಮಾರ್ಗದ ಚಿನ್ನಮನೆ ಬಳಿ ನಡೆದಿದೆ.
ದೇವಸ್ಥಾನಕ್ಕೆ ತೆರಳುತ್ತಿದ್ದ ಕೂರಂಬಳ್ಳಿ ನಿವಾಸಿ ಮಂಜುನಾಥ್ ಮೃತ ದುರ್ದೈವಿ. ಶಿವಮೊಗ್ಗದಿಂದ ರಿಪ್ಪನ್‌ಪೇಟೆ ಕಡೆ ತೆರಳುತ್ತಿದ್ದ ಗಜಾನನ (ಚಕ್ರಾ) ಬಸ್ ಹಾಗೂ ಬೈಕ್ (KA14EG6503) ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.