ಇನ್ಮುಂದೆ ಸಿಗಂದೂರು ಲಾಂಚ್‌ನಲ್ಲಿ ವಾಹನಗಳಿಗಿಲ್ಲ ಪ್ರವೇಶ ! ಕಾರಣವೇನು ?

0 708

ಸಾಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಾಗರದ ಸಿಗಂದೂರು ಚೌಡೇಶ್ವರಿಗೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ. ಆದರೆ ಇನ್ಮುಂದೆ ಭಕ್ತರಿಗೆ ಬರಲು ಕಷ್ಟವಾಗು ಸಾಧ್ಯತೆ ಇದೆ.

ಇದಕ್ಕೆ ಕಾರಣ ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಪರಿಣಾಮ ಶರಾವತಿ ಹಿನ್ನೀರಿನ ಮಟ್ಟ ಇಳಿಕೆಯಾಗಿದೆ. ಹಾಗಾಗಿ ಮುಂಜಾಗ್ರತ ಕ್ರಮವಾಗಿ ಜೂನ್ 14ರಿಂದ ಸಿಗಂದೂರು ಲಾಂಚ್‌ನಲ್ಲಿ ಬಸ್, ಕಾರು ಸೇರಿದಂತೆ ಇತರೆ ವಾಹನ ಸಾಗಣೆ ನಿಲ್ಲಿಸಲಾಗುತ್ತಿದೆ.

ವಾಹನಗಳನ್ನು ಹತ್ತಿಸಿದರೆ ದಡದ ಕೆಸರಿನಲ್ಲಿ ಲಾಂಚ್ ಸಿಕ್ಕಿ ಬೀಳ್ಳುವ ಸಾಧ್ಯತೆ ಇದೆ. ಹಾಗಾಗಿ ಜನರನ್ನು ಮಾತ್ರ ಲಾಂಚ್‌ಗೆ ಹತ್ತಿಸಲು ನಿರ್ಧರಿಸಲಾಗಿದೆ. ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆ ಆದ ಕಾರಣ ಲಾಂಚ್ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಮುಂಗಾರು ಆರಂಭವಾಗದಿದ್ದರೆ ಲಾಂಚ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಸಾಧ್ಯತೆಗಳು ಇದೆ. ಸ್ಥಳೀಯರ ಸಂಚಾರ ದೃಷ್ಟಿಯಿಂದ ಸಣ್ಣ ಲಾಂಚ್ ಮತ್ತು ಬೋಟ್ ವ್ಯವಸ್ಥೆ ಮಾಡಲಾಗಿದೆ.

ಪ್ರವಾಸಿಗರಿಗೆ ತೀವ್ರ ತೊಂದರೆ ಸಾಧ್ಯತೆ

ಈ ಲಾಂಚ್ ಸ್ಥಗಿತಗೊಂಡರೆ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ತೀವ್ರ ತೊಂದರೆ ಆಗಲಿದ್ದು, ಸುತ್ತಿ ಬಳಸಿ, ದೇವಸ್ಥಾನಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಲಿದೆ. ಸಾಗರ ತಾಲೂಕಿನ ಸಿಗಂದೂರು, ತುಮರಿ, ಬ್ಯಾಕೋಡು, ಕಟ್ಟಿನಕಾರು ಭಾಗದ ಜನರಿಗೆ ಈ ಲಾಂಚ್ ಸಂಪರ್ಕ ಕೊಂಡಿಯಾಗಿದೆ.

ಸಂಕ್ರಮಣಕ್ಕೆ ಅದ್ದೂರಿ ಜಾತ್ರೆ

ಪ್ರತಿ ವರ್ಷ ಮಕರ ಸಂಕ್ರಮಣ ಮತ್ತು ಅದರ ಮರುದಿನ ಎರಡು ದಿನ ಸಿಗಂದೂರು ದೇವಿಯ ಅದ್ದೂರಿ ಜಾತ್ರೆಯು ನಡೆಯುತ್ತದೆ. ಶರಾವತಿಯ ಹಿನ್ನೀರಿನ ಲಾಂಚ್ ಮೂಲಕ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಾರೆ.

Leave A Reply

Your email address will not be published.

error: Content is protected !!