ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ಮಗು ಸಾವು!

0
9054

ಭದ್ರಾವತಿ: ಅಡಿಕೆ ಬೇಯಿಸುವ ಹಂಡೆಗೆ ಬಿದ್ದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಎಂಬುವವರ ಪುತ್ರ ಧನರಾಜ್ (04) ಮೃತಪಟ್ಟ ಮಗುವಾಗಿದೆ. ಆ. 29 ರಂದು ಮಂಜುನಾಥ್ ಅವರ ಮನೆ ಹಿಂಭಾಗ ಅಡಿಕೆ ಬೇಯಿಸುವ ಕೆಲಸ ನಡೆಯುತ್ತಿತ್ತು. ಅಡಿಕೆ ಬೇಯಿಸುವ ಹಂಡೆಯ ಪಕ್ಕದಲ್ಲಿಯೇ ಸ್ಟೂಲ್ ಒಂದನ್ನು ಇರಿಸಲಾಗಿತ್ತು. ಮನೆಯವರ ಗಮನಕ್ಕೆ ಬಾರದೆ ಈ ಕಡೆ ಬಂದ ಮಗು ಸ್ಟೂಲ್ ಹತ್ತಿ ಹಂಡೆಯ ಕಡೆ ಬಗ್ಗಿದಾಗ ಈ ಘಟನೆ ನಡೆದಿದೆ.

ಕುದಿಯುತ್ತಿದ್ದ ಅಡಿಕೆ ಹಂಡೆಗೆ ಬಿದ್ದ ಮಗು ಕೂಗಿದಾಕ್ಷಣ ಧಾವಿಸಿದ ಪೋಷಕರು ಮಗುವನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ತೀವ್ರ ಸುಟ್ಟ ಗಾಯಗಳಾಗಿತ್ತು. ತಕ್ಷಣವೇ ಮಗುವನ್ನು ಶಿವಮೊಗ್ಗದ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. 13 ದಿನಗಳ ಸತತ ಹೋರಾಟದ ಬಳಿಕ ಮಗು ಚಿಕಿತ್ಸೆ ವಿಫಲಕಾರಿಯಾಗದೇ ಶನಿವಾರ ಸಾವನ್ನಪ್ಪಿದೆ.

ಅಡಿಕೆ ಗೊನೆ ತೆಗೆಯುವಾಗ ವೇಳೆ ಮರದಿಂದ ಬಿದ್ದು ಹಾಗೆ ಅಡಿಕೆ ನುಂಗಿ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿರುವ ಸಾಕಷ್ಟು ಘಟನೆ ನಡೆದಿದೆ. ಆದರೆ, ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ಮೃತಪಟ್ಟ ಘಟನೆ ಇತ್ತೀಚಿನ ದಶಕದಲ್ಲಿ ಇದೇ ಮೊದಲು ಎನ್ನಲಾಗಿದೆ.

ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here