ಅಪ್ರಾಪ್ತ ಬಾಲಕಿ ಬಟ್ಟೆ ಬದಲಿಸುವ ವಿಡಿಯೋ ಮಾಡಿ ಆಕೆಗೆ ಬ್ಲಾಕ್ ಮೇಲ್ ಮಾಡಿ ಎರಡೂವರೆ ತಿಂಗಳಿಂದ ನಿರಂತರವಾಗಿ ಅತ್ಯಾಚಾರ.. ! ಇಬ್ಬರು ಆರೋಪಿಗಳು ಅಂದರ್.. !!

0
4513

– ಗಣೇಶನ ವಿಸರ್ಜನೆ ವೇಳೆ ಬೆಳಕಿಗೆ ಬಂದ ಪ್ರಕರಣ..!

ಕಡೂರು: ಅಪ್ರಾಪ್ತ ಬಾಲಕಿ ಬಟ್ಟೆ ಬದಲಿಸುವ ವಿಡಿಯೋ ಮಾಡಿಕೊಂಡು ಆಕೆಗೆ ಬೆದರಿಸಿ ಎರಡೂವರೆ ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿ ಡ್ರೆಸ್ ಚೇಂಜ್ ಮಾಡುವ ವಿಡಿಯೋ ಮಾಡಿಕೊಂಡು ಅದೇ ಗ್ರಾಮದ ಯುವಕ ಆಕೆಗೆ ವಿಡಿಯೋ ತೋರಿಸಿ, ನಾನು ಕರೆದಾಗಲೆಲ್ಲ ಹೇಳಿದ ಜಾಗಕ್ಕೆ ಬರಬೇಕು. ಇಲ್ಲವಾದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್‌ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿದ್ದಾನೆ. ಇದರಿಂದ ಹೆದರಿದ ಬಾಲಕಿ ಅವನು ಹೇಳಿದಂತೆ ಕೇಳಿದ್ದಾಳೆ.

ಅಪ್ರಾಪ್ತೆಯ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಕಳೆದ ಎರಡೂವರೆ ತಿಂಗಳಿಂದ ಅತ್ಯಾಚಾರಗೈದಿದ್ದಾನೆ. ಇಷ್ಟೇ ಅಲ್ಲದೇ ಕಾಲಾನಂತರ ಈ ಆರೋಪಿಯೊಂದಿಗೆ ಈತನ ಇನ್ನಿತರ ಸ್ನೇಹಿತರು ಕೈಜೋಡಿಸಿದ್ದಾರೆ, ಇದೀಗ ವಿಷಯ ಬೆಳಕಿಗೆ ಬಂದಿದ್ದು, ಪ್ರಮುಖ ಆರೋಪಿ ಸೇರಿದಂತೆ ಒಟ್ಟು ಇಬ್ಬರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತನ ಮನೆಯಲ್ಲೇ ಅತ್ಯಾಚಾರ:

ಅಪ್ರಾಪ್ತ ಬಾಲಕಿ ಡ್ರೆಸ್ ಚೇಂಜ್ ಮಾಡುವ ವಿಡಿಯೋ ಮಾಡಿಕೊಂಡಿದ್ದ ಪ್ರಮುಖ ಆರೋಪಿ, ಅಪ್ರಾಪ್ತೆ ಮೇಲೆ ಅತ್ಯಾಚಾರಗೈಯಲು ತನ್ನ ಸ್ನೇಹಿತನ ಮನೆಯನ್ನೇ ಆರಿಸಿಕೊಂಡಿದ್ದನು. ಆರೋಪಿ ಹೇಳಿದಾಗೆಲ್ಲ ಸ್ನೇಹಿತ ತನ್ನ ಮನೆ ನೀಡುತ್ತಿದ್ದ. ಕಳೆದ ಎರಡೂವರೆ ತಿಂಗಳಿಂದ ಈತನ ಮನೆಯಲ್ಲೇ ಆರೋಪಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರವನ್ನೂ ವಿಡಿಯೋ ಮಾಡಿಕೊಂಡು ಅದನ್ನು ತೋರಿಸಿಯೂ ಬೆದರಿಸುತ್ತಿದ್ದ ಎಂದು ಹೇಳಲಾಗಿದೆ.

ಬಾಲಕಿಗೆ ಕೀಟಲೆ:

ಅಪ್ರಾಪ್ತೆ ಡ್ರೆಸ್ ಚೇಂಜ್ ಮಾಡುವ ವಿಡಿಯೋ ಮಾಡಿಕೊಂಡಿದ್ದ ಆರೋಪಿ, ಇದನ್ನು ತನ್ನ ಸ್ನೇಹಿತರಿಗೂ ತೋರಿಸಿದ್ದ. ಹೀಗಾಗಿ ಬಾಲಕಿ ರಸ್ತೆಯಲ್ಲಿ ಓಡಾಡುವಾಗಲೂ ಆತನ ಸ್ನೇಹಿತರು ಚುಡಾಯಿಸುತ್ತಿದ್ದರು. ನಿನ್ನ ವಿಡಿಯೋ ನೋಡಿದ್ದೇವೆ, ಸೂಪರ್ ಎಂದು ರಸ್ತೆಯಲ್ಲಿ ಓಡಾಡುವಾಗ ಕೀಟಲೆ ಮಾಡುತ್ತಿದ್ದರು. ಆದರೆ ಬಾಲಕಿ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆಂದು ಹೆದರಿ ಯಾರಿಗೂ ಹೇಳಿರಲಿಲ್ಲ.

ಗಣಪತಿ ವಿಸರ್ಜನೆ ವೇಳೆ ವಿಷಯ ಬೆಳಕಿಗೆ:

ಇತ್ತೀಚೆಗೆ ಗ್ರಾಮದಲ್ಲಿ ತಮ್ಮ ಹಳ್ಳಿಯ ಗಣಪತಿ ವಿಸರ್ಜನಾ ಕಾರ್ಯಕ್ರಮವಿತ್ತು. ಆದರೆ ಅಂದು ಗಣಪತಿ ವಿಸರ್ಜನೆ ವೇಳೆಯೂ ಅಪ್ರಾಪ್ತೆ ಬಟ್ಟೆ ಬದಲಿಸುವ ವೀಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹುಡುಗರು ಒಬ್ಬರಿಂದ ಒಬ್ಬರು ನೋಡುತ್ತಿದ್ದರು. ವಿಷಯ ತಿಳಿದ ಸ್ಥಳೀಯರು ಬಾಲಕಿಯ ಚಿಕ್ಕಪ್ಪನ ಗಮನಕ್ಕೆ ತಂದಿದ್ದಾರೆ. ಆಗ ಬಾಲಕಿ ಚಿಕ್ಕಪ್ಪ ಕೇಳಿದಾಗ ನಡೆದ ವಿಷಯವನ್ನು ಹೇಳಿದ್ದಾಳೆ. ಕೂಡಲೇ ಸಖರಾಯಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ. ನೊಂದ ಅಪ್ರಾಪ್ತೆ ದೂರು ನೀಡುತ್ತಿದ್ದಂತೆ ಅತ್ಯಾಚಾರಕ್ಕೆ ಮನೆ ನೀಡಿದ್ದವ ಹಾಗೂ ರಸ್ತೆಯಲ್ಲಿ ಚೇಷ್ಟೆ ಮಾಡುತ್ತಿದ್ದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಮತ್ತೊಬ್ಬನನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಸಂಬಂಧ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here