ಆನಂದಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ ! ಪ್ರಿನ್ಸಿಪಾಲ್ ಎತ್ತಂಗಡಿ ?

0
4453

ಸಾಗರ: ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ಹಾಸ್ಟೆಲ್ ನಿಂದ ಹೊರ ಬಂದು ಯಡೆಹಳ್ಳಿಯ ಗಣಪತಿ ದೇವಸ್ಥಾನದ ಹತ್ತಿರ ಪ್ರತಿಭಟನೆ ನಡೆಸಿದರು.

ಹಾಸ್ಟೆಲ್ ಪ್ರಿನ್ಸಿಪಾಲ್ ಬಿ.ಕೆ ಚಂದ್ರಪ್ಪ ಹಾಗೂ ಕೆಲ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದು ಬೂಟು ಕಾಲಿನಿಂದ ಒದ್ದು ವಿದ್ಯಾರ್ಥಿಗಳಿಗೆ ಹಿಂಸೆ ನೀಡುತ್ತಿದ್ದಾರೆ ಹಾಗೂ ಊಟದಲ್ಲಿ ಹುಳುಯುಕ್ತ ಆಹಾರವನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದು ಕೇಳಿದರೆ ವಿದ್ಯಾರ್ಥಿಗಳಿಗೆ ಹೀನಾಮಾನ ಬೈದು ‘ಇಲ್ಲಿಂದ ನಿಮಗೆ ಟಿಸಿ ಕೊಟ್ಟು ಕಳುಹಿಸುತ್ತೇನೆ, ನಾವು ಹೇಳಿದ ಹಾಗೆ ಕೇಳುವುದಾದರೆ ಇರಿ ಇಲ್ಲದಿದ್ದರೆ ನಡೆಯಿರಿ’ ಎಂದು ಇದೀಗ ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಕೂಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ಹೊರ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಯಾವುದೇ ವ್ಯವಸ್ಥೆಯೂ ಸಹ ಸರಿಯಿಲ್ಲ ಪ್ರಿನ್ಸಿಪಾಲರನ್ನು ತಕ್ಷಣ ಅಮಾನತು ಮಾಡಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಸ್ಥಳಕ್ಕೆ ಬೆಳಗ್ಗೆ ಶಾಸಕ ಹರತಾಳು ಹಾಲಪ್ಪನವರು ಆಗಮಿಸಿ ವಿದ್ಯಾರ್ಥಿಗಳ ಅಳಲನ್ನು ಕೇಳಿ ಪ್ರಿನ್ಸಿಪಾಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶಿಸಿ ಕಾರ್ಯನಿಮಿತ್ತ ನಿರ್ಗಮಿಸಿದರು.

ಧರಣಿ ಸ್ಥಳದಲ್ಲೇ ಕುಳಿತ ಬೇಳೂರು:

ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಪ್ರಿನ್ಸಿಪಾಲ್ ಎತ್ತಂಗಡಿ ಆದೇಶ ಪ್ರತಿ ಕೈಗೆ ಸಿಗುವವರೆಗೂ ಜೊತೆಗಿದ್ದು ರಸ್ತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ನಿಮ್ಮೊಡನೆ ನಾನಿದ್ದೇನೆ ಎಂದು ವಿದ್ಯಾರ್ಥಿಗಳ ಜೊತೆಗೆ ಕೊನೆಯವರೆಗೂ ಇದ್ದು ವಿದ್ಯಾರ್ಥಿಗಳ ಹೋರಾಟಕ್ಕೆ ಆಸರೆಯಾದರು.

ಜಾಹಿರಾತು

LEAVE A REPLY

Please enter your comment!
Please enter your name here