ಕಾಡು ಕೋಣಗಳ ಹಿಂಡು ದಿಢೀರ್ ಪ್ರತ್ಯಕ್ಷ ; ಕಂಗಾಲಾದ ರೈತ ಸಮೂಹ

0
975

ರಿಪ್ಪನ್‌ಪೇಟೆ: ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡಸೂರು, ನಾಗರಹಳ್ಳಿ, ಸಮಟಗಾರು ಗ್ರಾಮಗಳಲ್ಲಿ ದಿಢೀರ್ ಕಾಣಿಸಿಕೊಂಡ ಕಾಡುಕೋಣಗಳ ಹಿಂಡು ಕಂಡು ರೈತನಾಗರೀಕರು ಭಯಭೀತರಾಗಿದ್ದಾರೆ.

ಬೇಸಿಗೆ ಕಾಲವಾಗಿರುವ ಕಾರಣ ರೈತರು ತಮ್ಮ ಅಡಿಕೆ ತೋಟಗಳಿಗೆ ನೀರು ಹರಿಸಲು ಹೋಗುವುದಕ್ಕೆ ಭಯಪಡುವಂತಾಗಿದೆ. ಹಗಲು ಪವರ್‌ಕಟ್ ನಿಂದಾಗಿ ರೈತರು ರಾತ್ರಿ ವೇಳೆ ತ್ರಿಪೇಸ್ ಲೈನ್ ವಿದ್ಯುತ್ ಬಂದ ಮೇಲೆ ಹೊಲ ಗದ್ದೆಗಳಿಗೆ ನೀರು ಹಾಯಿಸಲು ಜಮೀನಿಗೆ ತೆರಳಿ ಮೋಟಾರ್ ಸ್ವಿಚ್ ಹಾಕಲು ಹೋಗಬೇಕಾಗಿದ್ದು ಈ ವೇಳೆಯಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದರೆ ಕೆಲದಿನಗಳ ಹಿಂದೆ ಹುಲಿ ಸಹ ಕಾಣಿಸಿಕೊಂಡ ಸುದ್ದಿ ಇನ್ನೂ ಮರೆಯಾಗುವ ಮುನ್ನವೇ ಪಕ್ಕದ ಗ್ರಾಮ ಪಂಚಾಯ್ತಿಗಳಾದ ಬೆಳ್ಳೂರು, ಅಮೃತ, ಹೆದ್ದಾರಿಪುರ ವ್ಯಾಪ್ತಿಯ ಹಲವು ಕಡೆಯಲ್ಲಿ ಆನೆ ದಾಳಿ ನಡೆಸಿ ತೋಟ, ಗದ್ದೆ ಅಡಿಕೆ ಬಾಳೆ ಧ್ವಂಸಗೊಳಿಸಿರುವ ಬೆನ್ನಲ್ಲೇ ಈ ರೀತಿ ಕಾಡುಕೋಣ ಹಿಂಡು ದಿಢೀರ್ ಪ್ರತ್ಯಕ್ಷವಾಗಿರುವುದು ರೈತ ನಾಗರೀಕರನ್ನು ಕಂಗಾಲಾಗಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here