ಧನುರ್ಮಾಸ ಮುಕ್ತಾಯ | ಲೋಕಕಲ್ಯಾಣಾರ್ಥ ಸಂಕ್ರಾಂತಿ ಶಿವಪೂಜಾನುಷ್ಠಾನ : ಕೋಣಂದೂರು ಮಠದಲ್ಲಿ ಧಾರ್ಮಿಕ ಧರ್ಮಸಮಾರಂಭ

0
190

ರಿಪ್ಪನ್‌ಪೇಟೆ: ಸಮೀಪದ ಕೋಣಂದೂರು ಬೃಹನ್ಮಠದಲ್ಲಿ ಕಳೆದ ಒಂದು ತಿಂಗಳಿಂದ ಲೋಕಕಲ್ಯಾರ್ಣಾಥವಾಗಿ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ಧನುರ್ಮಾಸ ಸಂಕ್ರಾಂತಿ ಶಿವಪೂಜಾನುಷ್ಟಾನ ಮತ್ತು ಧಾರ್ಮಿಕ ಧರ್ಮ ಸಮಾರಂಭವನ್ನು ಸರಳವಾಗಿ ಸಂಪ್ರದಾಯದಂತೆ ನಡೆಸಲಾಗುವುದೆಂದು ಮಠದ ಪ್ರಕಟಣೆ ತಿಳಿಸಿದೆ.

ಓಮಿಕ್ರೋನ್ ಮೂರನೆ ಅಲೆ ಜಗತ್ತನೇ ತಲ್ಲಣಗೊಳಿಸಿದ್ದು ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಕೋವಿಡ್ ನಿಯಮದಂತೆ ಜನವರಿ 14ರಂದು ಶುಕ್ರವಾರದ ಮಕರ ಸಂಕ್ರಾಂತಿಯ ದಿನದಂದು ಧನುರ್ಮಾಸ ಶಿವಪೂಜಾನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಶ್ರೀ ಶಿವಲಿಂಗೇಶ್ವರ ಸ್ವಾಮಿಯ ದರ್ಶನ ಆಶೀರ್ವಾದ ಪಡೆಯುವವರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕೆಂದು ಮಠದ ಪ್ರಕಟಣೆ ತಿಳಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here