ಮಲೆನಾಡು ಭಾಗದಲ್ಲಿ ಮತ್ತೆ ಆರಂಭವಾದ ಮಳೆಗಾಲದ ಹತ್ಮೀನು ಶಿಕಾರಿ!

0
2186

ಮೂಡಿಗೆರೆ: ಮಲೆನಾಡಿನಲ್ಲಿ ಮಳೆ ಸುರುವಾಯಿತು ಅಂದರೆ ಸಾಕು ಅನೇಕ ಚಟುವಟಿಕೆಗಳು ಆರಂಭಗೊಳ್ಳುತ್ತದೆ ಮಲೆನಾಡು ಭಾಗದ ಜನರಲ್ಲಿ ಮಳೆ ಉತ್ಸಾಹ ತುಂಬುವ ಮದ್ದು ಆಗಿದ್ದು. ಕೃಷಿ ಚಟುವಟಿಕೆಯ ಜೊತೆಗೆ ಇನ್ನಷ್ಟು ಕಾರ್ಯಕ್ರಮಗಳು ಅನಾವರಣಗೊಳ್ಳುತ್ತವೆ.

ಮಲೆನಾಡಿನಾದ್ಯಂತ ಪುನರ್ವಸು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದ್ದು, ಈ ಸಂದರ್ಭದಲ್ಲಿ ಉತ್ಸಾಹಿ ಯುವಕರು-ಜನರು ಹತ್ಮೀನು (ಮೀನು ಹಿಡಿಯುವುದು) ಬೇಟೆಯಲ್ಲಿ ತೊಡಗಿದ್ದು, ಹೇಮಾವತಿ, ತುಂಗಾ ಮತ್ತು ಭದ್ರಾ ನದಿ ಹಾಗೂ ಅವುಗಳ ಉಪನದಿಗಳು, ಹಳ್ಳಕೊಳ್ಳಗಳಲ್ಲಿ ಮೀನು ಹಿಡಿಯುವ ದೃಶ್ಯಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿವೆ.‌ ಜೋರು ಮಳೆ ಬಂದಾಗ ಯುವಕರು ಮೀನು ಶಿಕಾರಿಯಲ್ಲಿ ತೊಡಗುತ್ತಾರೆ.

ಕೊಟ್ಟಿಗೆಹಾರ, ಬಣಕಲ್, ಗಬ್ಗಲ್, ಮರ್ಕಲ್, ಮಾಗುಂಡಿ, ಬಾಳೆಹೊನ್ನೂರು ಸುತ್ತಮುತ್ತ ಮೀನು ಶಿಕಾರಿಯಲ್ಲಿ ಸಿಕ್ಕ ರಾಶಿರಾಶಿ ಮೀನುಗಳನ್ನು ತಂದು ಉಪ್ಪು, ಹುಳಿ, ಖಾರ ಹಾಕಿ ಖಾದ್ಯ ಮಾಡಿ ಸವಿದು ಖುಷಿ ಪಡೆಯುತ್ತಾರೆ.

ಈ ತರಹದ ಮೀನು ಶಿಕಾರಿ ಮಲೆನಾಡು ಭಾಗದಲ್ಲಿ ಒಂದು ಕಲೆಯಾಗಿ ಗುರುತಿಸಲ್ಪಟ್ಟಿದೆ.

ಜಾಹಿರಾತು

LEAVE A REPLY

Please enter your comment!
Please enter your name here