ರೈತರಿಗೆ ಸರಳವಾಗಿ ಹಾಗೂ ದೀರ್ಘ ಕಾಲದ ಪ್ರಯೋಜನಕ್ಕೆ ಬರುವಂತ ಕಾರ್ಯಕ್ರಮಗಳ ಅಗತ್ಯವಿದೆ : ಬಿ.ಸಿ ನರೇಂದ್ರ

0
88

ಚಿಕ್ಕಮಗಳೂರು: ಸರ್ಕಾರ ಮಾಡಿರುವ ಹಲವಾರು ಜನಪರ ಯೋಜನೆಗಳು ರೈತರಿಗೆ ಸರಳವಾಗಿ ಹಾಗೂ ದೀರ್ಘ ಕಾಲದ ಪ್ರಯೋಜನಕ್ಕೆ ಬರುವಂತ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ.ನರೇಂದ್ರ ಹೇಳಿದ್ದರು.

ಮಂಗಳವಾರ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯಿಂದ ರೈತರಿಗೆ ಉಪಯುಕ್ತವಾಗುವ ಹಾಗೂ ಕೃಷಿಗೆ ಪೂರಕವಾಗಿ ಕಡಿಮೆ ನೀರು ಬಳಸಿ ಬೆಳೆಯಬಹುದಾದಂತಹ ಗಿಡ ಮರಗಳ ಸಸಿಗಳನ್ನು ಹೆಚ್ಚು ಹೆಚ್ಚು ವಿತರಿಸಲು ಮುಂದಾಗಬೇಕು, ಕಡಿಮೆ ಗುರಿ ಇಟ್ಟುಕೊಂಡು ಎಲ್ಲಾ ರೈತರಿಗೆ ಸಿಗದೇ ಇದ್ದಾಗ ಆ ಯೋಜನೆ ನಿಗಧಿತ ಪ್ರಮಾಣದಲ್ಲಿ ಯಶಸ್ಸು ಸಿಗಲು ಸಾಧ್ಯವಿಲ್ಲ, ಹೆಚ್ಚು ಗುರಿ ಹಾಗೂ ಹೆಚ್ಚು ರೈತರನ್ನು ತಲುಪುವಂತಹ ಯೋಜನೆ ಜಾರಿಯಾಗಲು ಎಲ್ಲಾ ಇಲಾಖೆಗಳು ಮುಂದಾಗಬೇಕು ಕಂದಾಯ ಇಲಾಖೆಗಳಲ್ಲಿ ಪಹಣಿಯಲ್ಲಿ ಬೆಳೆಗಳ ಹೆಸರು ನಮೂದು ಆಗುವಂತೆ ಕ್ರಮಕೈಗೊಳ್ಳಬೇಕು, ಸರ್ಕಾರ ಆತ್ಮನಿಭರ್ಯ ಯೋಜನೆಯು ಹೆಚ್ಚು ಪ್ರಚಲಿತಗೊಳ್ಳಬೇಕು, ಇದರ ಪ್ರಯೋಜನ ಎಲ್ಲಾ ರೈತರಿಗೆ ಸಿಗುವಂತೆ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.

ರೈತರು ಮುಂದಿನ ದಿನಗಳಲ್ಲಿ ನೀರು, ಮಣ್ಣು ಹಾಗೂ ಹವಾಮಾನ ಆಧಾರಿತ ಬೆಳೆಗಳನ್ನು ಅವಲಂಬಿಸಿ ಕೃಷಿಯನ್ನು ಮಾಡುವುದರಿಂದ ಪ್ರಯೋಜನ ಆಗಲಿದೆ.

ಬೆಳೆ ವಿಮೆಯಲ್ಲಿ ಬಹಳ ಗೊಂದಲಗಳಿದ್ದು, ಅವುಗಳನ್ನು ಕೂಡಲೆ ಸರಿಪಡಿಸಿಕೊಡಬೇಕು, ರೈತರ ಗೊಂದಲಗಳನ್ನು ನಿವಾರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಡಾ. ಎಂ.ತಿರುಮಲೇಶ್ ನಮ್ಮ ಜಿಲ್ಲೆಯಲ್ಲಿ 722025 ಹೆಕ್ಟೇರ್ ಭೌಗೋಳಿಕ ಪ್ರದೇಶವಿದ್ದು, 313377 ಹೆಕ್ಟೇರ್ ಸಾಗುವಳಿಗೆ ಲಭ್ಯವಿದ್ದು, ಒಟ್ಟು 22347 ಜನ ಸಾಗುವಳಿದಾರರಿದ್ದು, ಆ ಪೈಕಿ 128613 ಜನ ಅತೀ ಸಣ್ಣ ರೈತರು, 56022 ಸಣ್ಣ ರೈತರು, 16422 ಮಧ್ಯಮ ರೈತರು ಹಾಗೂ 22420 ದೊಡ್ಡ ರೈತರಿದ್ದು, ಒಟ್ಟು 223477 ಸಾಗುವಳಿದಾರರ ಪೈಕಿ 23681 ಪರಿಶಿಷ್ಟ ಜಾತಿಗೆ ಸೇರಿದ ರೈತರಿಂದು, 3763 ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು ಹಾಗೂ 1451 ಅಲ್ಪಸಂಖ್ಯಾತ ರೈತರಿದ್ದಾರೆ ಎಂದರು.

ಜಿಲ್ಲೆಯಲ್ಲಿ ವಾರ್ಷಿಕ ಮಳೆ 1833 ಮಿ.ಮೀ ಇದ್ದು, 2021 ಜನವರಿ ಯಿಂದ ಡಿಸೆಂಬರ್ 24-12-2021 ವರೆಗೆ ವಾಡಿಕೆ ಮಳೆ 1830 ಮಿ.ಮೀ ಗೆ ಎದುರಾಗಿ ವಾಸ್ತವವಾಗಿ 2069 ಮಿ.ಮೀ 13% ಹೆಚ್ಚು ಮಳೆ ಆಗಿದ್ದು ಜಿಲ್ಲೆಯಲ್ಲಿ ಭತ್ತ, ಮುಸುಕಿನ ಜೋಳ, ತೊಗರಿ, ಅಲಸಂತೆ, ಉದ್ದು, ಹೆಸರು, ಸೂರ್ಯಕಾಂತಿ, ಶೇಂಗಾ ಮತ್ತು ಕಡಲೆ, ಜೋಳ ಸೇರಿ ಒಟ್ಟು 11378 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಡಿಸೆಂಬರ್ ಕೊನೆಯವರೆಗೂ 11134.07 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದ್ದು, ಬಿತ್ತನೆ ಬೀಜ ದಾಸ್ತಾನಿರುವುದಿಲ್ಲ ಯೂರಿಯಾ ಡಿ.ಎ.ಪಿ ಹಾಗೂ ಕಾಂಪ್ಲೆಕ್ಸ್‌ಗಳು ಸೇರಿ ಒಟ್ಟು 129780 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, ಖಾಸಗಿ ಡೀಲರ್‌ಗಳು ಹಾಗೂ ಮಾರುಕಟ್ಟೆ ಫೆಡರೇಷನ್ ಮೂಲಕ 125024 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿದ್ದ 111024 ಮೆಟ್ರಿಕ್ ಟನ್ ವಿತರಣೆಯಾಗಿದ್ದು, 15750 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದರು.

2021 ನೇ ಸಾಲಿನ ಮುಂಗಾರಿಗೆ 129080 ಹೆಕ್ಟೇರಿಗೆ ಬಿತ್ತನೆ ಗುರಿ ಇದ್ದು, ಇದುವರೆಗೆ 113609 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.88.0ರಷ್ಟು ಪ್ರಗತಿಯಾಗಿದ್ದು, ಮುಸುಕಿನಜೋಳ, ರಾಗಿ, ಭತ್ತ, ಹೆಸರು, ತೊಗರಿ, ಅಲಸಂದೆ, ಉದ್ದು, ಸೂರ್ಯಕಾಂತಿ ಮತ್ತು ಶೇಂಗಾ ಮುಖ್ಯ ಬೆಳೆಗಳಾಗಿದ್ದು, 2021ನೇ ಸಾಲಿನ ಹಿಂಗಾರಿಗೆ 28900 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈವರೆಗೆ (೨೪-೧೨-೨೦೨೧) ಸುಮಾರು 27495 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.95.0 ರಷ್ಟು ಪ್ರಗತಿಯಾಗಿರುತ್ತದೆ. ಕಡಲೆ, ಹಿಂಗಾರಿ ಜೋಳ ಮತ್ತು ಹುರುಳಿ ಮುಖ್ಯ ಬೆಳೆಗಳಾಗಿರುತ್ತದೆ .

2015-16ನೇ ಸಾಲಿನಲ್ಲಿ ಒಟ್ಟು 53893 ರೈತರು ರೂ.427.848 ಲಕ್ಷಗಳ ಪ್ರಿಮಿಯಂ ಪಾವತಿಸಿದ್ದು, ರೈತರಿಗೆ ಪರಿಹಾರವಾಗಿ ರೂ.828.14636 ಲಕ್ಷಗಳು ಪಾವತಿಯಾಗಿದ್ದು, ರೂ.5.52 ಲಕ್ಷಗಳ ಪಾವತಿ ಬಾಕಿ ಇದ್ದು, 2020-21ನೇ ಸಾಲಿನಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಒಟ್ಟು 2778 ರೈತರು ರೂ.38.44 ಲಕ್ಷ ಪ್ರಿಮಿಯಂ ಹಣ ಪಾವತಿಸಿದ್ದು, 915 ರೈತರಿಗೆ ಪರಿಹಾರವಾಗಿ ಈವರೆಗೆ ರೂ.71.94 ಲಕ್ಷಗಳು ಪಾವತಿಯಾಗಿದ್ದು, 63 ಜನ ರೈತರಿಗೆ ರೂ.1.82 ಲಕ್ಷಗಳ ಪಾವತಿ ಬಾಕಿ ಇರುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 223477 ರೈತರ ಪೈಕಿ 142356 ರೈತರು ಪ್ರೂಟ್ಸ್ ತಂತ್ರಾಂಶದ ಮೂಲಕ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಣಿಯಾಗಿದ್ದು, ಈವರೆಗೆ 119938 ರೈತರಿಗೆ ಒಟ್ಟು 9 ಕಂತುಗಳಲ್ಲಿ ರೈತರಿಗೆ ರೂ. 17934.16 ಲಕ್ಷ ಪಾವತಿಯಾಗಿದೆ.

2018-19ರಿಂದ ಈವರೆಗೆ 188 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 147 ಪ್ರಕರಣಗಳಿಗೆ ತಲಾ ರೂ.5.00 ಲಕ್ಷಗಳಂತೆ ಪರಿಹಾರ ವಿತರಿಸಲಾಗಿದ್ದು, 10 ಪ್ರಕರಣಗಳು ಪರಿಹಾರ ಪಾವತಿಸಲು ಬಾಕಿ ಇದ್ದು, 27 ಪ್ರಕರಣಗಳು ತಿರಸ್ಕೃತಗೊಂಡಿರುತ್ತದೆ. ಉಳಿದಂತೆ 2029-20ರಲ್ಲಿ 14, 2020-22ರಲ್ಲಿ 03 2021-22ರಲ್ಲಿ 10 ಪ್ರಕರಣಗಳು ಸಮಿತಿಯ ತೀರ್ಮಾನಕ್ಕೆ ಬಾಕಿ ಇದೆ ಎಂದು ಹೇಳಿದರು.

ಇದರೊಂದಿಗೆ ಅರಣ್ಯ, ರೇಷ್ಮೆ, ತೋಟಗಾರಿಕೆ, ವಿದ್ಯುತ್ ಕಂದಾಯ ವಿಷಯಗಳ ಬಗ್ಗೆ ಚರ್ಚೆಲಾಗಿತ್ತು.

ಸಭೆಯಲ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರುಗಳಾದ ಕೆ.ಹೆಚ್. ಕುಮಾರಸ್ವಾಮಿ, ಡಿ.ಎಲ್.ಅಶೋಕ್, ಚಂದ್ರಮೌಳಿ, ರಂಗನಾಥ್ ಸೇರಿದಂತೆ ಸದಸ್ಯರುಗಳಾದ ಐ.ಕೆ. ವಸಂತೇಗೌಡ, ರವಿ ಕೃಷಿ ಇಲ್ಲಾಖೆಯ ಅಧಿಕಾರಿಗಳದ ಮೋಹನ ದಾಸ್, ಚೌವಾಣ್, ಸುರೇಶ್, ವಿಜಯಲಕ್ಷ್ಮಿ, ಸಿಬ್ಬಂದಿಗಳು ಸದಸ್ಯರುಗಳು ಇತರೆ ಇಲಾಖೆಯ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here