ಹೆದ್ದಾರಿಪುರದಲ್ಲಿ ರಸಮೇವು ತಯಾರಿಕಾ ಪ್ರಾತ್ಯಕ್ಷಿಕೆ

0
956

ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಮದಲ್ಲಿನ ಹೆಚ್.ಎನ್. ಭೀಮರಾಜ್ ರವರ ಫಾರಂ ಹೌಸ್ ನಲ್ಲಿ ಹುಂಚ ರೈತ ಸಂಪರ್ಕ ಕೇಂದ್ರದ ಆಶ್ರಯದಲ್ಲಿ ರಸಮೇವು ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಗುರುವಾರದಂದು ನಡೆಯಿತು.

ರಿಪ್ಪನ್‌ಪೇಟೆ ಪಶುವೈದ್ಯಕೀಯ ಆಸ್ಪತ್ರೆಯ ಪಶುವೈದ್ಯರಾದ ಡಾ. ಗಿರೀಶ್ ರವರು ರಸಮೇವು ತಯಾರಿಕೆ ಬಗ್ಗೆ ಪ್ರಾಯೋಗಿಕವಾಗಿ ತಯಾರಿಸಿ ರೈತರಿಗೆ ಮಾಹಿತಿ ನೀಡಿದರು.

ಈ ರಸಮೇವು ತಯಾರಿಕೆಯಿಂದ ಆಗುವ ಲಾಭಗಳ ಬಗ್ಗೆ ಮತ್ತು ರೈತರಿಗೆ ಉಪಯೋಗದ ಬಗ್ಗೆ ಸವಿಸ್ತಾರವಾಗಿ ರೈತರಿಗೆ ತಿಳಿಸಿದರು ಮತ್ತು ರೈತರು ಗ್ರಾಮೀಣ ಪ್ರದೇಶದಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅತಿ ಸುಲಭದಲ್ಲಿ ರಸಮೇವನ್ನು ಹೇಗೆ ತಯಾರಿಸಬಹುದು ಎನ್ನುವುದನ್ನು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕರು ಹಾಗೂ ಕೃಷಿ ಅಧಿಕಾರಿಗಳಾದ ರವಿಕುಮಾರ್ ಹಾಗೂ ಸಯ್ಯದ್ ಅಹಮದ್ ರವರು ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸಹಕಾರಿ ಧುರೀಣ ತೊರೆಗದ್ದೆ ಲೋಕಪ್ಪಗೌಡ, ಪ್ರಗತಿಪರ ರೈತರಾದ ಹೆದ್ದಾರಿಪುರದ ಶಶಿಧರ ಮತ್ತು ಹಾಲುಗುಡ್ಡೆ ಆದರ್ಶ ಹಾಗೂ ವಡಾಹೊಸಳ್ಳಿಯ ಶ್ರೀಧರ ಮುಂತಾದ ಪ್ರಮುಖ ರೈತರುಗಳು ಭಾಗವಹಿಸಿ ಪ್ರಾತ್ಯಕ್ಷಿಕೆಯ ಉಪಯೋಗವನ್ನು ಪಡೆದರು.

ಜಾಹಿರಾತು

LEAVE A REPLY

Please enter your comment!
Please enter your name here