ಹೆಲ್ಮೆಟ್ ಇಲ್ಲದೆ ಡ್ರಿಂಕ್ & ಡ್ರೈವ್: ಬೈಕ್ ಸವಾರನಿಗೆ 10,500 ರೂ. ದಂಡ ವಿಧಿಸಿದ ಕೋರ್ಟ್‌ !

0
1079

ಹೊಸನಗರ : ಹೆಲ್ಮೆಟ್ ಇಲ್ಲದೆ ಪಾನಮತ್ತನಾಗಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ತಾಲೂಕು ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗರಸು ವಾಸಿಯಾದ ಮನೋಹರ ಎಂಬಾತನ ವಿರುದ್ಧ ಹೊಸ ನಗರ ಪೊಲೀಸರು ಮದ್ಯಪಾನ ಸೇವಿಸಿ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕಾರಣ ಆತನ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಮೊಕದ್ದಮೆ ದಾಖಲಿಸಿ ಆತನನ್ನು ಹೊಸನಗರ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ಕೆ. ರವಿಕುಮಾರ್ ಅವರು ಆರೋಪಿ ಮನೋಹರ್’ಗೆ ಮದ್ಯಪಾನ ಸೇವಿಸಿ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸುವುದಕ್ಕೆ 10,000 ರೂ. ಹಾಗೂ ಹೆಲ್ಮೆಟ್ ಇಲ್ಲದ ಕಾರಣ 500 ರೂ.ಗಳ ದಂಡ ವಿಧಿಸಿರುವುದಾಗಿ ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here