ಹೊಸನಗರ: ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

0
445

ಶಿವಮೊಗ್ಗ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ ಯೋಜನೆಗೆ ತಾಲೂಕು ಪಂಚಾಯಿತಿಯಲ್ಲಿ ಒಬ್ಬರು ಯಾವುದೇ ಪದವಿ ಹೊಂದಿರುವ ವಿಕಲಚೇತನರನ್ನು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನಾಗಿ (ಎಂ.ಆರ್.ಡಬ್ಲ್ಯೂ) ಹಾಗೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ ಹೊಂದಿರುವ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು (ವಿ.ಆರ್.ಡಬ್ಲ್ಯೂ) ಗೌರವಧನ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಲು ಸೊರಬ ತಾಲೂಕು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೊಸನಗರ ತಾಲೂಕಿನ ಹರಿದ್ರಾವತಿ, ಯಡೂರು, ರಾಮಚಂದ್ರಪುರ ಗ್ರಾಮ ಪಂಚಾಯತಿಗಳಲ್ಲಿ ವಿ.ಆರ್.ಡಬ್ಲ್ಯೂ. ಹುದ್ದೆಗಳು ಖಾಲಿಯಿದ್ದು, ಸ್ಥಳೀಯ 18 ರಿಂದ 45 ವರ್ಷದೊಳಗಿನ ಅರ್ಹ ವಿಕಲಚೇತನರು ನಿಗಧಿತ ನಮೂನೆ ಅರ್ಜಿಗಳನ್ನು ತಾಲೂಕು ಪಂಚಾಯಿತಿಯ ಎಂ.ಆರ್.ಡಬ್ಲ್ಯೂ ಅವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 24/09/2021 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅರ್ಜಿ ಮತ್ತು ಮಾಹಿತಿಗಾಗಿ ರವಿಕುಮಾರ್ ಮೊ.ಸಂ.: 9731922693ನ್ನು ಸಂಪರ್ಕಿಸುವುದು.

ಜಾಹಿರಾತು

LEAVE A REPLY

Please enter your comment!
Please enter your name here