ಹೊಸನಗರ ಪೊಲೀಸ್ ಠಾಣೆಯಲ್ಲಿ ನೇತ್ರದಾನ ಹಾಗೂ ನೇತ್ರ ಚಿಕಿತ್ಸಾ ಶಿಬಿರ

0 433

ಹೊಸನಗರ : ಪೊಲೀಸ್ ಠಾಣೆಯ (Police Station) ಮೆಟ್ಟಿಲೇರುವುದೆಂದರೆ ಸಾರ್ವಜನಿಕರಿಗೆ ಒಂಥರಾ ಮುಜುಗರ. ಆದರೆ ಇಂದು ಹೊಸನಗರ (Hosanagara) ಠಾಣೆಯಲ್ಲಿ ರಕ್ಷಣಾ ಇಲಾಖೆ ಸಿಬ್ಬಂದಿ ಕುಟುಂಬ ವರ್ಗ ಹಾಗೂ ಸಾರ್ವಜನಿಕರಿಗಾಗಿ ನೇತ್ರದಾನ (Eye Donation) ಹಾಗೂ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸುವ ಮೂಲಕ ಪೊಲೀಸರು (Police) ಜನ ಸ್ನೇಹಿ ಎಂಬುದನ್ನು ಸಾಬೀತುಪಡಿಸಿದರು.

ಇಂದು ಠಾಣೆಯಲ್ಲಿ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಪಿಎಸ್ಐ ಶಿವಾನಂದ ವೈ.ಕೆ ನಮ್ಮ ಸಿಬ್ಬಂದಿಗಳ ಸಹಕಾರದಿಂದ ಉಡುಪಿಯ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್‌ನ ಪ್ರಸಾದ್ ನೇತ್ರಾಲಯದ ನೇತೃ ತಜ್ಞರು ಹಾಗೂ ಸಿಬ್ಬಂದಿಗಳಿಂದ ನೇತೃ ತಪಾಸಣಾ ಶಿಬಿರ ಆಯೋಜಿಸಿದ್ದು ನೇತ್ರ ವೈದ್ಯ ಡಾ. ಅಹನಾ ನೇತ್ರತ್ವದಲ್ಲಿ ಯಶಸ್ವಿ ಶಿಬಿರ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟನೆ ನಂತರ ಟ್ರಸ್ಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರೀಶ್ ರವರು ಮಾತನಾಡಿ, ಕಣ್ಣುಗಳ ಬಗ್ಗೆ ನಿರ್ಲಕ್ಷ್ಯ ಸಲ್ಲ ಆಗಾಗ್ಗೆ ಕಣ್ಣುಗಳ ತಪಾಸಣೆ ಮಾಡಿಸುತ್ತಿರಬೇಕು ನಮ್ಮ ದೇಹದ ಪ್ರಮುಖಾಂಗ ಕಣ್ಣು ಕಣ್ಣಿನ ಸಮಸ್ಯೆ ಇದ್ದವರು ಸಂಘ ಸಂಸ್ಥೆಗಳವರು ಆರೋಗ್ಯ ಕೇಂದ್ರ ದವರು ಏರ್ಪಡಿಸುವ ಶಿಬಿರಗಳಲ್ಲಿ ಪಾಲ್ಗೊಂಡು ಸೌಲಭ್ಯ ಪಡೆಯಬೇಕೆಂದರು.

ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಹದ ಪ್ರಮುಖಾಂಗ ಕಣ್ಣು ಇಲ್ಲದಿದ್ದರೆ ಜೀವನವೇ ನಶ್ವರ ಎನಿಸುವುದು. ಮೊಬೈಲ್ ಬಳಕೆಯಿಂದ ಇತ್ತೀಚೆಗೆ ಕಣ್ಣಿನ ಸಮಸ್ಯೆ ಎಲ್ಲಾ ವಯೋಮಿತಿಯವರಲ್ಲು ಕಾಡುತ್ತಿದ್ದು ಕಾರಣ ಅನಿವಾರ್ಯವಾದರೂ ಮೊಬೈಲ್ ಬಳಕೆಯಿಂದ ದೂರವಿರಬೇಕೆಂದು ಎಲ್ಲರೂ ಮರಣನಂತರ ನೇತ್ರದಾನ ಮಾಡುವುದರಿಂದ ಇಬ್ಬರು ಅಂಧರ ಬಾಳಿಗೆ ಬೆಳಕಾಗಬಹುದಾಗಿದೆ. ಆದುದರಿಂದ ಕಣ್ಣಿನ ರಕ್ಷಣೆ ಬಗ್ಗೆ ಜಾಗೃತಿ ವಹಿಸಬೇಕೆಂದರು.

ಪಿಎಸ್ಐ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಹೆಡ್ ಕಾನ್ಸ್‌ಟೇಬಲ್ ಹಾಲೇಶಪ್ಪ ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.

error: Content is protected !!