ಗಣೇಶನಿಗೆ ಜೀವಂತ ಇಲಿಯನ್ನೇ ಅರ್ಪಿಸಿದ ಭಕ್ತ! ಇದ್ಯಾಕ್ ಹೀಗೆ?

0
750

ಮೂಡಿಗೆರೆ: ನಾಡಿನೆಲ್ಲೆಡೆ ಗಣೇಶ ಹಬ್ಬವನ್ನ ಕೊರೊನಾ ಹಿನ್ನೆಲೆಯಲ್ಲಿ ಒಂದಷ್ಟು ಷರತ್ತುಗಳ ಜೊತೆಗೆ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾಗಿದೆ. ಗಣೇಶನನ್ನ ಕೂರಿಸುವ ಪ್ರತಿಯೊಬ್ಬರು ಆತನ ವಾಹನ ಇಲಿಯನ್ನ ಮರೆಯುವ ಹಾಗಿಲ್ಲ. ಗಣಪತಿ ವಿಗ್ರಹದಂತೆ ಮಣ್ಣಿನಲ್ಲೇ ಮಾಡಿದ ಪುಟಾಣಿ ಮೂಷಿಕ (ಇಲಿ) ನನ್ನು ಇಡ್ತಾರೆ. ಆದ್ರೆ ಅಲ್ಲೊಬ್ಬ ರೈತ ತನ್ನ ಬೆಳೆಯನ್ನು ಉಳಿಸು ಅಂತ ಗಣಪನಿಗೆ ನಿಜವಾದ ಮೂಷಿಕವನ್ನೇ ನೀಡಿದ್ದಾನೆ.

ಹೌದು, ತಾಲ್ಲೂಕಿನ ಮರ್ಕಲ್ ಗ್ರಾಮದಲ್ಲಿ ಯುವಕನೊಬ್ಬ ತಮ್ಮ ಕೃಷಿ ಪ್ರದೇಶದ ಬೆಳೆಗಳಿಗೆ ಮೂಷಿಕಗಳಿಂದ ಆಗುತ್ತಿರುವ ಬೆಳೆಹಾನಿಯಿಂದ ಬೇಸತ್ತು ಗಣೇಶನಿಗೆ ಮೂಷಿಕ ಅರ್ಪಿಸಿ ಬೆಳೆಹಾನಿ ತಪ್ಪಿಸುವಂತೆ ಬೇಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ರೈತ ನಿತಿನ್ ಎಂಬುವವರ ಹೊಲದಲ್ಲಿ ಇಲಿಗಳ ಕಾಟ ಜೋರಾಗಿದ್ದು ಯಾವುದೇ ಔಷಧಿ ಇಟ್ಟರು ಇಲಿಗಳ ಕಾಟ ಮಾತ್ರ ತಪ್ಪಿಲ್ಲ. ಇಲಿಗಳು ಬೆಳೆದ ಬೆಳೆಯನ್ನು ನಾಶ ಮಾಡ್ತಾ ಇದ್ದವು. ಇದಕ್ಕೆ ನೊಂದ ರೈತ ಮರ್ಕಲ್ ಗ್ರಾಮದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದ್ದು ಈ ವೇಳೆ ಮೂಷಿಕವೊಂದನ್ನು ಹಿಡಿದು ತಂದು ಗಣೇಶನಿಗೆ ಅರ್ಪಿಸಿ ತನ್ನ ಪ್ರಾರ್ಥನೆ ಸಲ್ಲಿಸಿದ್ದಾನೆ.

ಮೂಷಿಕ ತಂದು ಗಣೇಶನ ವಿಗ್ರಹದ ಬಳಿ ಬಿಡುತ್ತಿದ್ದಂತೆ‌ ಬದುಕಿದೆ ಬಡ ಜೀವ ಎಂದು ಅದು ಕಾಲಿಗೆ ಬುದ್ದಿ ಹೇಳಿದೆ‌.

ಜಾಹಿರಾತು

LEAVE A REPLY

Please enter your comment!
Please enter your name here