ನೀವೇ ಪಾಕಿಸ್ತಾನಕ್ಕೆ ಹೋಗಿ ; ಪ್ರತಾಪ್ ಸಿಂಹ ವಿರುದ್ಧ ಕಿಮ್ಮನೆ ರತ್ನಾಕರ್ ವಾಗ್ದಾಳಿ

0
491

ಶಿವಮೊಗ್ಗ: ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ನೀವೇ ಯಾಕೆ ಪಾಕಿಸ್ತಾನಕ್ಕೆ ಹೋಗಬಾರದು ? ಎಂದು ಮಾಜಿ ಮಂತ್ರಿ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.

ಭಾನುವಾರ ಶಿವಮೊಗ್ಗ ನಗರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ಹಿನ್ನಲೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ಹಿಜಬ್ ಮತ್ತು ಕೇಸರಿ ಶಾಲಿನ ವಿಚಾರದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ವಿಚಾರ ಈಗ ಅಂತರಾಷ್ಟ್ರದ ಮಟ್ಟಕ್ಕೆ ಹೋಗಿ ತಲುಪಿದೆ. ಜನರಿಗೆ ಕಾರ್ಯಕ್ರಮ ಕೊಟ್ಟು ಆ ಆಧಾರದ ಮೇಲೆ ಬಿಜೆಪಿ ಮತ ಕೇಳುತ್ತಿಲ್ಲ. ಭಾವನೆಗಳನ್ನ ಕೆರಳಿಸಿ ಮತ ಕೇಳುವ ಮಟ್ಟಕ್ಕೆ ಬಿಜೆಪಿ ಇಳಿದಿದೆ ಎಂದು ಕಿಮ್ಮನೆ ಆರೋಪಿಸಿದ್ದಾರೆ.

ಇಂದಿರಾಗಾಂಧಿಯವರು ಕಾರ್ಯಕ್ರಮದ ಆಧಾರದ‌ಮೇರೆಗೆ ಮತಕೇಳಿದ್ದರು. ಇಂದಿರಾಗಾಂಧಿ ಬ್ಯಾಂಕ್ ರಾಷ್ಟ್ರೀಕರಣಗೊಳಿಸಿ ಬಡವರು ಬ್ಯಾಂಕ್‌ಗೆ ತೆರಳುವಂತೆ ಮಾಡಿದರೆ ಪ್ರಧಾನಿ ಮೋದಿ ಬಡವರು ಬ್ಯಾಂಕ್ ಹತ್ತಿರನೂ ಸುಳಿಯದಂತೆ ನೋಡಿಕೊಂಡಿದ್ದಾರೆ.

ಹಿಜಬ್ ವಿಷಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಿನ ಚುನಾವಣೆಯ ತಾಲೀಮು ಎಂದು ಬಣ್ಣಿಸಿರುವ ಕೆಪಿಸಿಸಿ ವಕ್ತಾರ ಕಾರ್ಯಕ್ರಮದ ಮೇರೆಗೆ ರಾಜ್ಯವನ್ನ ದೇಶವನ್ನ ಗೆಲ್ಲೋದು ಸಾಧ್ಯವಿಲ್ಲವೆಂಬುದು ಬಿಜೆಪಿಗೆ ಗೊತ್ತಾಗಿದೆ ಹಾಗಾಗಿ ಈ ವಿಷಯವನ್ನ ಶಾಲೆಯಲ್ಲಿ ಹರಡುವಂತೆ ಮಾಡಿ ಮತ್ತೆ ಅಧಿಕಾರಕ್ಕೆ ಬರುವ ತಂತ್ರವೆಂದರು.

ಸಿ.ಟಿ ರವಿ ಸಚಿವ ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹರ ಹೇಳಿಕೆ ಯಾರಿಗಾದರೂ ಸಿಟ್ಟು ಬರಿಸುತ್ತದೆ.‌ ಪ್ರತಾಪ್ ಸಿಂಹ ಮಾತೆತ್ತಿದರೆ ಪಾಕಿಸ್ತಾಕ್ಕೆ ತೆರಳಿ ಎನ್ನುತ್ತಾರೆ ನೀವೆ ಹೋಗಿ ಎಂದರು.‌ ರಾಷ್ಟ್ರೋತ್ಥಾನದವರು ಹೊರತರುವ ಪುಸ್ತಕದಲ್ಲಿ ಗಾಂಧಿ, ನೆಹರೂ ಅವರನ್ನೇ ವಿಲನ್ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ಮತ್ತು ತೀರ್ಥಹಳ್ಳಿ ಕ್ಷೇತ್ರಕ್ಕೆ ಮಾತ್ರ ಆರಗ ಜ್ಞಾನೇಂದ್ರ ಗೃಹ ಮಂತ್ರಿಗಳು :

ಬೆಂಗಳೂರು ಮತ್ತು ತೀರ್ಥಹಳ್ಳಿಗೆ ಮಾತ್ರ ನಮ್ಮ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಗೃಹಸಚಿವರಾಗಿದ್ದಾರೆ. ಇನ್ನಾದರೂ ತಾವು ರಾಜ್ಯದ ಗೃಹ ಮಂತ್ರಿಗಳು ಎಂದು ಅರಿತುಕೊಳ್ಳಲಿ ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here