ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಸಾಮೂಹಿಕ ಅನ್ನಸಂತರ್ಪಣೆ

0
260

ರಿಪ್ಪನ್‌ಪೇಟೆ : ಇತಿಹಾಸ ಪ್ರಸಿದ್ದ ಭೈರಾಪುರ ಶ್ರೀ ಸಿದ್ದೇಶ್ವರ ಸ್ವಾಮಿ ಗವಟೂರು ರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ಇಂದು ಬೆಳಗ್ಗೆ ದೇವರಿಗೆ ರುದ್ರಾಭಿಷೇಕ ಅಭಿಷೇಕ ಪೂಜಾ ಕೈಂಕರ್ಯಗಳು ಸಂಭ್ರಮದೊಮದಿಗೆ ಜರುಗಿತು.

ಪಟ್ಟಣದ ಹೊರವಲಯದಲ್ಲಿರುವ ಸಿದ್ದೇಶ್ವರ ದೇವಾಲಯದಲ್ಲಿ ಅಲವಳ್ಳಿಯ ವೇ.ಬ್ರ.ಮಹೇಶ್ವರಮೂರ್ತಿ ನೇತೃತ್ವದಲ್ಲಿ ವಿಶೇಷ ಪೂಜೆ ರುದ್ರಾಭಿಷೇಕ ಮತ್ತು ಅಭಿಷೇಕ ಅಲಂಕಾರ ಪೂಜೆ ನೆರವೇರಿತು. ನಂತರ ಮಹಾಮಂಗಳಾರತಿಯೊಂದಿಗೆ ಸಾರ್ವಜನಿಕರಿಗೆ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

ದೇವಸ್ಥಾನದ ಅರ್ಚಕ ಸ್ವಾಮಿ ಮತ್ತು ಗವಟೂರು ದೇವಸ್ಥಾನದ ಧರ್ಮರಾಜ್ ಸಿದ್ದೇಶ್ವರ ಸ್ವಾಮಿ ರಾಮೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here