ನರಸಿಂಹರಾಜಪುರ: ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ದೈಹಿಕ ಶಿಕ್ಷಕ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದೂರು ದಾಖಲಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಸರ್ಕಾರಿ ಶಾಲೆಯೊಂದರ ದೈಹಿಕ ಶಿಕ್ಷಕ ಪ್ರಭುನಾಯ್ಕನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಪ್ರಭುನಾಯ್ಕ ವಿರುದ್ದ ಬಿಇಒ ದೂರು ನೀಡಿದ್ದರು. ಆಗಸ್ಟ್16 ಬೆಳಗ್ಗೆಯಿಂದಲೇ ಶಾಲೆಗೆ ಎಸ್ಪಿ ಅಕ್ಷಯ್ ಭೇಟಿ ನೀಡಿ ತನಿಖಾ ವರದಿ ಪರಿಶೀಲಿಸಿದ್ದರು. ನಂತರ ಶಿಕ್ಷಕನ ವಿರುದ್ದ 11 ಎಫ್ಐಆರ್ಗಳು ದಾಖಲಾಗಿದ್ದವು. ಶಿಕ್ಷಕನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಐದಾರು ದಿನಗಳಿಂದ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲೊ ಶೋಧ ಕಾರ್ಯ ನಡೆಸಿದ್ದರು.
Related
You cannot copy content of this page